ನವದೆಹಲಿ: ದೆಹಲಿಯಲ್ಲಿ ಮೆಟ್ರೊ ರೈಲು ಪ್ರಯಾಣಿಕರು ಇನ್ನು ಉಚಿತವಾಗಿ ಇಂಟರ್‌ನೆಟ್ ಸೇವೆ ಪಡೆಯಬಹುದು. ಹೈಸ್ಪೀಡ್ ಸಾಮರ್ಥ್ಯದ ವೈ–ಫೈ ಉಚಿತ ಸೇವೆಗೆ ಮೆಟ್ರೊ ರೈಲು ಸೇವೆಯ ಹಳದಿ ಮಾರ್ಗದಲ್ಲಿ ಆರಂಭಿಸಲಾಗಿದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಡಿಎಂಆರ್‌ಸಿಯು ಜನವರಿ 2020ರಲ್ಲಿ ನವದೆಹಲಿ ಮತ್ತು ದ್ವಾರ್ಕಾ ಸೆಕ್ಟರ್ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕೋಚ್ ಒಳಗಡೆ ವೈ–ಫೈ ಸೌಲಭ್ಯ ಕಲ್ಪಿಸಿತ್ತು. ಒಂದು ವರ್ಷದ ಅವಧಿಯಲ್ಲಿಯೇ ಹಳದಿ ಮಾರ್ಗದಲ್ಲಿಯೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ದಕ್ಷಿಣ ಏಷಿಯಾ ವಲಯದಲ್ಲಿಯೇ ಯಾವುದೇ ದೇಶದಲ್ಲಿ ಇಂಥ ಸೌಲಭ್ಯ ಒದಗಿಸಿರುವ ಮೊದಲ ಮೆಟ್ರೊ ರೈಲು ಸೇವೆಯು ದೆಹಲಿಯದ್ದಾಗಿದೆ. 22.7 ಕಿ.ಮೀ. ಅಂತರದ ಈ ಮಾರ್ಗದಲ್ಲಿ ಒಟ್ಟು ಆರು ನಿಲ್ದಾಣಗಳು ಬರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.