ಗುಂಪು ಹಲ್ಲೆ
– ಗೆಟ್ಟಿ ಚಿತ್ರ
ನವದೆಹಲಿ: ಎದುರಾಳಿ ಗುಂಪಿಗೆ ಮಾಹಿತಿ ನೀಡಿದ್ದಾನೆ ಎಂಬ ಕಾರಣಕ್ಕೆ 13 ಮಂದಿ ಬಾಲಕರ ಗುಂಪೊಂದು, 14 ವರ್ಷದ ಬಾಲಕನೊಬ್ಬನ ಮೇಲೆ ದಾರುಣವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕೃಷ್ಣಾ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕನ ಮೃತದೇಹ ದೆಹಲಿಯ ಕಾಲುವೆಯೊಂದರಲ್ಲಿ ಜುಲೈ 1ರಂದು ಪತ್ತೆಯಾಗಿತ್ತು. ‘ಮೃತದೇಹದ ಮೇಲೆ 24 ಇರಿತದ ಗುರುತುಗಳಿದ್ದವು. ದೇಹದ ಅಲ್ಲಲ್ಲಿ ಸುಟ್ಟ ಗಾಯಗಳಿದ್ದವು. ಲೈಂಗಿಕ ದೌರ್ಜನ್ಯ ಎಸಗಿ ಮರ್ಮಾಂಗದ ಮೇಲೆ ಹಲ್ಲೆ ನಡೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.