ADVERTISEMENT

ದೆಹಲಿ ಮಾರುಕಟ್ಟೆಯಲ್ಲಿ ಖಾಸಗಿ ಏರ್‌ಲೈನ್ಸ್‌ನ ಪೈಲಟ್‌ ಬಂಧನ: ಕಾರಣ ಏನು?

ಪಿಟಿಐ
Published 5 ಸೆಪ್ಟೆಂಬರ್ 2025, 11:33 IST
Last Updated 5 ಸೆಪ್ಟೆಂಬರ್ 2025, 11:33 IST
<div class="paragraphs"><p>ಬಂಧನ </p></div>

ಬಂಧನ

   

ನವದೆಹಲಿ: ಖಾಸಗಿ ಏರ್‌ಲೈನ್ಸ್‌ನ ಪೈಲಟ್ ಒಬ್ಬ, ದೆಹಲಿ ಮಾರುಕಟ್ಟೆಗಳಲ್ಲಿ ಸಂಚರಿಸಿ ರಹಸ್ಯವಾಗಿ ಅಪರಿಚಿತ ಮಹಿಳೆಯರ ವಿಡಿಯೊಗಳನ್ನು ಸೆರೆ ಹಿಡಿಯುತ್ತಿದ್ದ ಎಂದು ಆರೋಪಿಸಲಾಗಿದೆ.

ಸದ್ಯ ದೆಹಲಿ ಪೊಲೀಸರು ಆರೋಪಿತ ಪೈಲಟ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆತನ ಹೆಸರು ಬಹಿರಂಗವಾಗಿಲ್ಲ.

ADVERTISEMENT

ದಕ್ಷಿಣ ದೆಹಲಿಯ ಶಾನಿ ಬಜಾರ್‌ನಲ್ಲಿ ಆರೋಪಿತ 31 ವರ್ಷದ ಪೈಲಟ್‌, ಸ್ಪೈ ಮಾದರಿಯ ರಹಸ್ಯ ಕ್ಯಾಮೆರಾಗಳನ್ನಿಟ್ಟುಕೊಂಡು ಮಹಿಳೆಯರ ವಿಡಿಯೊ, ಫೋಟೊಗಳನ್ನು ಸೆರೆ ಹಿಡಿಯುತ್ತಿದ್ದ ಎಂದು ಆರೋಪಿಸಲಾಗಿದೆ.

ಈ ವೇಳೆ ಮಹಿಳೆಯೊಬ್ಬರು ಆರೋಪಿತನ ಮೇಲೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪೃವೃತ್ತರಾದ ಪೊಲೀಸ್ ಸಿಬ್ಬಂದಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಪೈಲಟ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ಆರೋಪಿಯಿಂದ ಸ್ಪೈ ಮಾದರಿಯ ರಹಸ್ಯ ಕ್ಯಾಮೆರಾ ಹಾಗೂ ಇನ್ನೀತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆದಿದೆ ಎಂದು ಡಿಸಿಪಿ ಅಮಿತ್ ಗೋಯಲ್ ತಿಳಿಸಿದ್ದಾರೆ.

ಈ ಕುರಿತು ದೆಹಲಿಯ ಕೃಷ್ಣಗಢ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.