ADVERTISEMENT

ಆನ್‌ಲೈನ್‌ ಮೂಲಕ ಶಸ್ತ್ರಾಸ್ತ್ರ ಪರವಾನಿಗೆ

ಪಿಟಿಐ
Published 31 ಜನವರಿ 2019, 20:33 IST
Last Updated 31 ಜನವರಿ 2019, 20:33 IST

ನವದೆಹಲಿ: ಶಸ್ತ್ರಾಸ್ತ್ರ ಪರವಾನಗಿ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಸೌಕರ್ಯವನ್ನು ದೆಹಲಿ ಪೊಲೀಸ್ ಗುರುವಾರ ಪ್ರಾರಂಭಿದೆ.

‘ಆನ್‌ಲೈನ್‌ ಇ-ಆರ್ಮ್ಸ್ ಲೈಸೆನ್ಸಿಂಗ್ ಸಿಸ್ಟಮ್’ನಲ್ಲಿ ಹೊಸ ಶಸ್ತ್ರಾಸ್ತ್ರಗಳ ಪರವಾನಗಿ, ಅಸ್ತಿತ್ವದಲ್ಲಿರುವ ಶಸ್ತ್ರಾಸ್ತ್ರಗಳ ಪರವಾನಗಿಗಳ ನವೀಕರಣ, ಇತರೆ ರಾಜ್ಯಗಳಿಂದ ಬಿಡುಗಡೆ ಮಾಡಲಾದ ಶಸ್ತ್ರಾಸ್ತ್ರ ಪರವಾನಗಿಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶ ಹೊಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಆನ್‌ಲೈನ್‌ ತಾಣವನ್ನು ಐಟಿ ವೃತ್ತಿಪರರೊಂದಿಗೆ ಸಮಾಲೋಚಿಸಿ ವಿನ್ಯಾಸಗೊಳಿಸಲಾಗಿದೆ. ಜನರು ಮನೆಯಿಂದಲೇ ಪರವಾನಗಿ ಪಡೆಯಲು ಸೂಕ್ತ ದಾಖಲೆಗಳನ್ನು ಸಲ್ಲಿಸಬಹುದು ಮತ್ತು ತಮ್ಮ ಅರ್ಜಿಗಳ ಸ್ಥಿತಿಯನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.