ADVERTISEMENT

Delhi Rains | ದೆಹಲಿಯಲ್ಲಿ ಭಾರಿ ಮಳೆ, ಕನಿಷ್ಠ 10 ವಿಮಾನಗಳ ಮಾರ್ಗ ಬದಲು

ಪಿಟಿಐ
Published 1 ಆಗಸ್ಟ್ 2024, 0:02 IST
Last Updated 1 ಆಗಸ್ಟ್ 2024, 0:02 IST
<div class="paragraphs"><p>ಭಾರಿ ಮಳೆ ಕಾರಣ ದೆಹಲಿಯ ರಾಜಿಂದರ್‌ ನಗರದಲ್ಲಿ ನೀರು ನಿಂತಿದ್ದ ಪ್ರದೇಶ ದಾಟಲು ವಿದ್ಯಾರ್ಥಿಗಳು ಬುಧವಾರ ಪರಸ್ಪರ ಕೈಹಿಡಿದುಕೊಂಡು ಸಾಗಿದರು</p></div>

ಭಾರಿ ಮಳೆ ಕಾರಣ ದೆಹಲಿಯ ರಾಜಿಂದರ್‌ ನಗರದಲ್ಲಿ ನೀರು ನಿಂತಿದ್ದ ಪ್ರದೇಶ ದಾಟಲು ವಿದ್ಯಾರ್ಥಿಗಳು ಬುಧವಾರ ಪರಸ್ಪರ ಕೈಹಿಡಿದುಕೊಂಡು ಸಾಗಿದರು

   

–ಪಿಟಿಐ ಚಿತ್ರ  

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ADVERTISEMENT

ಆಗಸ್ಟ್‌ 5ರ ವರೆಗೆ ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಹಲವೆಡೆ ಮಳೆ ನೀರು ನಿಂತ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. 

ನಗರದ ಹಲವು ಪ್ರದೇಶಗಳಲ್ಲಿ ಮನೆಗಳೂ ಕುಸಿದಿವೆ. ಜನರು ಮನೆಯಿಂದ ಹೊರಬರಬಾರದು. ಬಾಗಿಲುಗಳು ಹಾಗೂ ಕಿಟಕಿಗಳನ್ನು ಭದ್ರವಾಗಿ ಹಾಕಿಕೊಳ್ಳಬೇಕು. ಅನಗತ್ಯ ಪ್ರಯಾಣ ಕೈಗೊಳ್ಳದಂತೆಯೂ ಇಲಾಖೆ ಸಲಹೆ ನೀಡಿದೆ.

ಪರಿಹಾರ ಕಾರ್ಯ ಸೇರಿದಂತೆ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದಕ್ಕಾಗಿ ಎಲ್ಲ ಅಧಿಕಾರಿಗಳು ಸನ್ನದ್ಧರಿರಬೇಕು ಎಂದು ಲೆಫ್ಟಿನೆಂಟ್‌ ಗವರ್ನರ್ ವಿ.ಕೆ.ಸಕ್ಸೇನಾ ಸೂಚನೆ ನೀಡಿದ್ದಾರೆ.

ಮಾರ್ಗ ಬದಲು: ಭಾರಿ ಮಳೆ ಕಾರಣ, ಕನಿಷ್ಠ 10 ವಿಮಾನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರತಿಕೂಲ ಹವಾಮಾನ ಕಾರಣ ಸಂಜೆ 7.30ರ ನಂತರ ವಿಮಾನಗಳ ಮಾರ್ಗಗಳ ಬದಲಾವಣೆ ಮಾಡಲಾಯಿತು. ಜೈಪುರನತ್ತ 8 ಹಾಗೂ ಲಖನೌನತ್ತ ಎರಡು ವಿಮಾನಗಳನ್ನು ಕಳುಹಿಸಲಾಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿಕೂಲ ಹವಾಮಾನ ಕಾರಣ ದೆಹಲಿಗೆ ಬರುವ ಹಾಗೂ ಇಲ್ಲಿಂದ ಹೊರಡುವ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಲಿದೆ ಎಂದು ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆ ತಿಳಿಸಿದೆ.

‘ದೆಹಲಿಯಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಪ್ರಯಾಣಿಕರು ತಾವು ಪ್ರಯಾಣಿಸಬೇಕಾದ ವಿಮಾನಗಳ ಸಂಚಾರ ಕುರಿತು ಪರಿಶೀಲಿಸಬೇಕು’ ಎಂದು ಇಂಡಿಗೊ ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.