ADVERTISEMENT

ಟ್ವಿಟ್ಟರ್‌ನಲ್ಲಿ `ಡೆಲ್ಲಿ ಅಂಡರ್ ಅಟ್ಯಾಕ್' ಹ್ಯಾಶ್ ಟ್ಯಾಗ್ ಟ್ರೆಂಡ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 6:22 IST
Last Updated 27 ಜನವರಿ 2021, 6:22 IST
ಟ್ವಿಟ್ಟರ್‌ನಲ್ಲಿ ತೆಗೆದ ಸ್ಕ್ರೀನ್ ಶಾಟ್
ಟ್ವಿಟ್ಟರ್‌ನಲ್ಲಿ ತೆಗೆದ ಸ್ಕ್ರೀನ್ ಶಾಟ್   

ನವದೆಹಲಿ:72ನೇ ಗಣರಾಜ್ಯೋತ್ಸವದ ದಿನ ರಾಜಧಾನಿ ದೆಹಲಿ ಅಕ್ಷರಶಃ ರಣಾಂಗಣವಾಗಿತ್ತು,. ರೈತರ ಹೋರಾಟ ಹಿಂಸೆಗೆ ತಿರುಗಿದ್ದರಿಂದ ದಂಗೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದ್ರಿಕ್ತರಿಂದ ತಪ್ಪಿಸಿಕೊಳ್ಳಲು ಪೊಲೀಸರು ಹರಸಾಹಸ ಪಡಬೇಕಾಯ್ತು.

ಬ್ಯಾರಿಕೇಡ್ ಮುರಿದು ಒಳನುಗ್ಗಿದ ರೈತರು, ಪೊಲೀಸರ ಜೊತೆ ಸಂಘರ್ಷ, ಕೆಂಪುಕೋಟೆ ಮೇಲೆ ಅನ್ಯ ಧ್ವಜದ ಹಾರಾಟ, ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಲು ಗೋಡೆ ಹಾರಿ, ಕಂದಕಕ್ಕೆ ಧುಮುಕಿದ ಪೊಲೀಸರು. ಹೀಗೆ ನಿನ್ನೆ ಹಲವು ಅಹಿತಕರ ಘಟನೆಗಳು ಟ್ವಿಟ್ಟರ್‌ನಲ್ಲಿ #DelhiUnderAttack ಹ್ಯಾಶ್ಟ್ಯಾಗ್ ಮೂಲಕ ಟ್ರೆಂಡ್ ಆಗಿವೆ.

ನಿನ್ನೆ ಪ್ರತಿಭಟನಾಕಾರರ ದಾಳಿ ವೇಳೆ ನಮ್ಮನ್ನು ಹೊಡೆಯಬೇಡಿ ಎಂದು ಪೊಲೀಸರು ಕೈಮುಗಿಯುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಮನೋಜ್ ಕುಮಾರ್ ಎಂಬುವವರು. ಈ ಚಿತ್ರ ಸಾವಿರ ಮಾತುಗಳನ್ನು ಹೇಳುತ್ತದೆ ಎಂದು ಶೀರ್ಷಿಕೆ ನೀಡಿದ್ಧಾರೆ.

ADVERTISEMENT

ಇನ್ನೂ ಕೆಲವರು 26/11 ಮುಂಬೈ ದಾಳಿಗೆ ದೆಹಲಿ ಹಿಂಸಾಚಾರವನ್ನು ಹೋಲಿಸಿದ್ದಾರೆ.

ಈ ಹಿಂಸೆಯನ್ನು ನೋಡಿ ನಾನು ಕಣ್ಣೀರು ಹಾಕಿದೆ.ನೀವೂ ನೋಡಿ ಕಣ್ಣೀರು ಹಾಕಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ, ನೆರೆಯ ಪಾಕಿಸ್ತಾನದ ಪಾಕಿಸ್ತಾನ ಮುಸ್ಲಿಂ ಲೀಗ್, ದೆಹಲಿ ಹಿಂಸಾಚಾರವನ್ನು ಸಂಭ್ರಮಿಸಿದೆ. ಗಣರಾಜ್ಯೋವದ ಬ್ಲ್ಯಾಕ್ ಡೇ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.