ADVERTISEMENT

ದೆಹಲಿಯಲ್ಲಿ ದಿಢೀರ್‌ ಹವಾಮಾನ ಬದಲಾವಣೆ

ಪಿಟಿಐ
Published 23 ಏಪ್ರಿಲ್ 2024, 15:51 IST
Last Updated 23 ಏಪ್ರಿಲ್ 2024, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಸಂಜೆ ಹಠಾತ್‌ ಆಗಿ ಹವಾಮಾನ ಬದಲಾವಣೆಯಾಗಿದೆ. ಇಡೀ ದಿನ ಅಧಿಕ ತಾಪಮಾನವಿದ್ದು, ಸಂಜೆ ಭಾರಿ ಗಾಳಿ ಬೀಸಿದೆ. ಜೊತೆಗೆ ಕೆಲ ಭಾಗಗಳಲ್ಲಿ ಹಗುರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಮೊದಲಿಗೆ ದೂಳು ಸಹಿತ ಭಾರಿ ಗಾಳಿ ಎದ್ದಿತ್ತು. ಬಳಿಕ ಗುಡುಗು ಸಹಿತ ಮಳೆ ಬಂದಿದೆ. ಮಳೆ ಸುರಿವಾಗಲೂ ಭಾರಿ ಗಾಳಿ ಬೀಸಿದೆ ಎಂದು ಇಲಾಖೆ ಹೇಳಿದೆ.

ADVERTISEMENT

ಈ ಋತುವಿನಲ್ಲಿ ದೆಹಲಿಯಲ್ಲಿ ಕನಿಷ್ಠ 22.6 ಡಿಗ್ರಿ ಸೆಲ್ಸಿಯಸ್‌, ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರುತ್ತದೆ. ಮಂಗಳವಾರದ ಗರಿಷ್ಠ ಉಷ್ಣಾಂಶವು ಸರಾಸರಿಗಿಂತ ಕಡಿಮೆ, ಅಂದರೆ 36.8 ಡಿಗ್ರಿ ಸೆಲ್ಸಿಯಸ್ ಇತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.