ADVERTISEMENT

ಜಮ್ಮು: ಬಂಧನಕ್ಕೊಳಗಾಗಿದ್ದ ಪ್ರತ್ಯೇಕತಾವಾದಿ ನಾಯಕ ಅಶ್ರಫ್ ಸೆಹ್ರಾಯ್ ನಿಧನ

ಪಿಟಿಐ
Published 5 ಮೇ 2021, 10:53 IST
Last Updated 5 ಮೇ 2021, 10:53 IST
ಅಶ್ರಫ್ ಸೆಹ್ರಾಯ್
ಅಶ್ರಫ್ ಸೆಹ್ರಾಯ್   

ಜಮ್ಮು: ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿ ಬಂಧನಕ್ಕೊಳಗಾಗಿದ್ದ ಪ್ರತ್ಯೇಕತಾವಾದಿ ನಾಯಕ ಮೊಹಮ್ಮದ್ ಅಶ್ರಫ್ ಸೆಹ್ರಾಯ್(77) ಅವರು ಬುಧವಾರ ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.

‘ಮಂಗಳವಾರ ಸಂಜೆ ಸೆಹ್ರಾಯ್‌ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ತಕ್ಷಣವೇ ಉಧಂಪುರ ಜಿಲ್ಲಾ ಜೈಲಿನಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಜಿಎಂಸಿ) ಸ್ಥಳಾಂತರಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.

‘ಕೋವಿಡ್‌–19 ರ‍್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆಯಲ್ಲಿ ಮೊಹಮ್ಮದ್‌ ಆಶ್ರಫ್‌ ಅವರ ವರದಿ ನೆಗೆಟಿವ್‌ ಬಂದಿತ್ತು. ಆರ್‌ಟಿ‍ಪಿಸಿಆರ್‌ ವರದಿಗಾಗಿ ಕಾಯುತ್ತಿದ್ದೇವೆ. ಅವರಲ್ಲಿ ಕೋವಿಡ್‌ ರೋಗಲಕ್ಷಣಗಳಿದ್ದವು. ಅಲ್ಲದೆ ಆಮ್ಲಜನಕ ಪ್ರಮಾಣವು ಕುಸಿದಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.