ADVERTISEMENT

ಜುಲೈ 15ರವರೆಗೆ ಅಂತರರಾಷ್ಟ್ರೀಯ ವಿಮಾನ ಸೇವೆ ರದ್ದು

ಪಿಟಿಐ
Published 26 ಜೂನ್ 2020, 17:57 IST
Last Updated 26 ಜೂನ್ 2020, 17:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಎಲ್ಲ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಜುಲೈ 15ರವರೆಗೆ ರದ್ದುಪಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ತಿಳಿಸಿದೆ. ನಿರ್ದಿಷ್ಟ ಪ್ರಕರಣಗಳನ್ನು ಆಧರಿಸಿ ಆಯ್ದ ಮಾರ್ಗಗಳಲ್ಲಿ ಅನುಮತಿ ನೀಡಬಹುದು ಎಂದು ಡಿಜಿಸಿಎ ಸುತ್ತೋಲೆ ಹೊರಡಿಸಿದೆ.

ಸದ್ಯ, ವಂದೇ ಭಾರತ್‌ ಮಿಷನ್‌ ಅಡಿ ಏರ್‌ ಇಂಡಿಯಾ ಮತ್ತು ಕೆಲ ಖಾಸಗಿ ವೈಮಾನಿಕ ಸಂಸ್ಥೆಗಳು ಕೆಲವೊಂದು ವಿಮಾನ ಸೇವೆಯನ್ನು ಒದಗಿಸುತ್ತಿವೆ. ಎರಡು ತಿಂಗಳ ಅಂತರದ ತರುವಾಯ ದೇಶೀಯ ವೈಮಾನಿಕ ಸೇವೆ ಮೇ 25ರಂದು ಪುನರಾರಂಭಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT