ADVERTISEMENT

ಮುಸ್ಲಿಂ ಎಂಬ ಕಾರಣಕ್ಕೆ ಗರ್ಭಿಣಿಗೆ ಚಿಕಿತ್ಸೆ ನೀಡದ ಉತ್ತರ ಪ್ರದೇಶದ ವೈದ್ಯೆ!

ಉತ್ತರಪ್ರದೇಶದಲ್ಲಿ ಅಮಾನುಷ ಘಟನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 14:56 IST
Last Updated 3 ಅಕ್ಟೋಬರ್ 2025, 14:56 IST
<div class="paragraphs"><p>ಗರ್ಭಿಣಿ</p></div>

ಗರ್ಭಿಣಿ

   

(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)

ಲಖನೌ: ಮುಸ್ಲಿಂ ಸಮುದಾಯದವರು ಎಂಬ ಕಾರಣಕ್ಕೆ ವೈದ್ಯೆಯೊಬ್ಬರು ಗರ್ಭಿಣಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಅಮಾನುಷ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ADVERTISEMENT

‘ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಹಾಗಾಗಿ ನಾನು ಚಿಕಿತ್ಸೆ ನೀಡಲ್ಲ. ಅವರನ್ನು ಬೇರೆ ಎಲ್ಲಿಗಾದರೂ ಕರೆದುಕೊಂಡು ಹೋಗಿ’ ಎಂದು ವೈದ್ಯೆ ಹೇಳಿರುವುದಾಗಿ ಮಹಿಳೆಯ ಪತಿ ಆರೋಪಿಸಿದ್ದಾರೆ.

ಗರ್ಭಿಣಿ ಶಮಾ ಪ್ರವೀಣ್‌ ಅವರನ್ನು ಅವರ ಪತಿ ನವಾಜ್‌ ಅವರು ಉತ್ತರಪ್ರದೇಶದ ಜೌನ್‌ಪುರದ ಜಿಲ್ಲಾ ಮಹಿಳಾ ಆಸ್ಪತ್ರೆಗೆ ಸೆಪ್ಟೆಂಬರ್‌ 30ರಂದು ಕರೆದುಕೊಂಡು ಬಂದಿದ್ದರು. ತನ್ನ ಪತ್ನಿಗೆ ಚಿಕಿತ್ಸೆ ನೀಡುವಂತೆ ಕರ್ತವ್ಯದಲ್ಲಿದ್ದ ವೈದ್ಯೆಗೆ ಮನವಿ ಮಾಡಿದರು. ಆದರೆ ಅವರು ಚಿಕಿತ್ಸೆ ನೀಡಲು ನಿರಾಕರಿಸಿದರು.

‘ನನ್ನನ್ನೂ ಸೇರಿದಂತೆ ಮುಸ್ಲಿಂ ಸಮುದಾಯದ ಇಬ್ಬರಿಗೆ ಚಿಕಿತ್ಸೆ ನೀಡಲು ವೈದ್ಯೆ ಹಿಂದೇಟು ಹಾಕಿ ಬೇರೊಬ್ಬರಿಗೆ ಚಿಕಿತ್ಸೆ ನೀಡಿದ್ದಾರೆ’ ಎಂದು ಶಮಾ ಅವರು ಆರೋಪಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೊ ಹರಿದಾಡಿದ ಬೆನ್ನಲ್ಲೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ವೈದ್ಯರಿಂದ ಮಾಹಿತಿ ಕೇಳಿದ್ದಾರೆ. ಆರೋಪ ಸಾಬೀತಾದರೆ ವೈದ್ಯೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.