ADVERTISEMENT

ನೀಟ್‌–ಪಿಜಿ ಮುಂದೂಡಿಕೆಗೆ ಒತ್ತಾಯ: ವೈದ್ಯರ ಪ್ರತಿಭಟನೆ

ಪಿಟಿಐ
Published 7 ಫೆಬ್ರುವರಿ 2023, 19:15 IST
Last Updated 7 ಫೆಬ್ರುವರಿ 2023, 19:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಮಾರ್ಚ್ ಆರಂಭದಲ್ಲಿ ನಿಗದಿಯಾಗಿರುವ ನೀಟ್‌–ಪಿಜಿ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಪರೀಕ್ಷಾ ಆಕಾಂಕ್ಷಿಗಳು ಹಾಗೂ ಕೆಲ ವೈದ್ಯರನ್ನೊಳಗೊಂಡ ಗುಂಪೊಂದು ಮಂಗಳವಾರ ಇಲ್ಲಿನ ಜಂತರ್ ಮಂತರ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದೆ.

‘ಪರೀಕ್ಷೆಯ ನಂತರದ ಕೌನ್ಸೆಲಿಂಗ್ ಜುಲೈನಲ್ಲಿ ನಡೆಯುವ ಸಾಧ್ಯತೆಯಿದೆ, ಆದ್ದರಿಂದ ಹೆಚ್ಚಿನ ಸಂಖ್ಯೆಯ ಇಂಟರ್ನಿಗಳು ಅರ್ಹತೆಯ ಸಮಸ್ಯೆಗಳನ್ನು ಎದುರಿಸಬಹುದು. ಹೀಗಾಗಿ ಪ್ರವೇಶ ಪರೀಕ್ಷೆಯನ್ನು ಮೇ ಅಥವಾ ಜೂನ್‌ಗೆ ಮುಂದೂಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದೇವೆ’ ಎಂದು ಫೆಡರೇಷನ್‌ ಆಫ್‌ ಆಲ್‌ ಇಂಡಿಯಾ ಮೆಡಿಕಲ್‌ ಅಸೋಸಿಯೇಷನ್‌ (ಎಫ್‌ಎಐಎಂಎ) ಸಂಸ್ಥಾಪಕ ಡಾ.ಮನೀಷ್‌ ಜಾಂಗ್ರಾ ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯವು ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.