ADVERTISEMENT

ವಿದೇಶಿ ಕರೆನ್ಸಿ ಕಳ್ಳಸಾಗಣೆ; ಕಸ್ಟಮ್ಸ್ ವಿರುದ್ಧ ಎಲ್‌ಡಿಎಫ್ ಪ್ರತಿಭಟನೆ

ಪಿಟಿಐ
Published 6 ಮಾರ್ಚ್ 2021, 11:27 IST
Last Updated 6 ಮಾರ್ಚ್ 2021, 11:27 IST

ಕೊಚ್ಚಿ: ವಿದೇಶಿ ಕರೆನ್ಸಿ (ಡಾಲರ್) ಕಳ್ಳಸಾಗಣೆ ಪ್ರಕರಣದಲ್ಲಿ ತಮ್ಮ ಪಕ್ಷದ ಪ್ರಮುಖ ನಾಯಕರ ವಿರುದ್ಧ ಕಸ್ಟಮ್ಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿರುವುದನ್ನು ವಿರೋಧಿಸಿ ಕೇರಳದ ಆಡಳಿತಾರೂಢ ಎಲ್‌ಡಿಎಫ್ ಪಕ್ಷ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ಇಲ್ಲಿ ಪ್ರತಿಭಟನೆ ನಡೆಸಿತು.

ಕಸ್ಟಮ್ಸ್‌ ಕಚೇರಿವರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದ ಸಿಪಿಐ(ಎಂ) ನೇತೃತ್ವದ ಮೈತ್ರಿಕೂಟದ ಕ್ರಮವನ್ನು ಗಂಭೀರವಾಗಿ ಗಮನಿಸಿದ ಕಸ್ಟಮ್ಸ್‌ ಅಧಿಕಾರಿಗಳು, ‘ರಾಜಕೀಯ ಪಕ್ಷವೊಂದು ತನಿಖಾ ಸಂಸ್ಥೆಯನ್ನು ಬೆದರಿಸಲು ಪ್ರಯತ್ನಿಸಿದರೆ ಅದು ಪ್ರಯೋಜನವಾಗುದಿಲ್ಲ‘ ಎಂದು ಸ್ಪಷ್ಟಪಡಿಸಿದೆ.

‘ಬೆದರಿಕೆ ಹಾಕಲು ಪ್ರಯತ್ನಿಸುವ ರಾಜಕೀಯ ಪಕ್ಷವು ಕೆಲಸ ಮಾಡುವುದಿಲ್ಲ‘ ಎಂದು ಕಸ್ಟಮ್ಸ್ (ಪ್ರಿವೆಂಟಿವ್) ಆಯುಕ್ತ ಸುಮಿತ್ ಕುಮಾರ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸಲು ಆರಂಭಿಸಿದ ನಂತರ ಕೇರಳದಲ್ಲಿ ರಾಜಕೀಯ ಸಮರ ಆರಂಭವಾಗಿದೆ. ಪ್ರಕರಣದ ಪ್ರಮುಖ ಆರೋಪಿ, ಸ್ವಪ್ನಾ ಸುರೇಶ್, ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿಧಾನಸಭಾ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಮತ್ತು ಯುಎಇ ಒಳಗೊಂಡ ಕೆಲವು ಮಂತ್ರಿಗಳ ವಿರುದ್ಧ 'ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.