ನವದೆಹಲಿ: ಸೇನಾ ಕಾರ್ಯಾಚರಣೆಗಳ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುವ ಭಾಗವಾಗಿ ಸ್ಫೋಟಕ ಅಡಗಿಸಿಟ್ಟ ಪ್ರದೇಶಗಳ ಯಾಂತ್ರಿಕ ಗುರುತು ಮಾಡುವ ಡಿಆರ್‌ಡಿಒ ವಿನ್ಯಾಸಗೊಳಿಸಿದ ಸಲಕರಣೆಯನ್ನು ಸೋಮವಾರ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಸೇನೆಯು ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದೆ.
ದೇಶೀಯ ಸಂಶೋಧನೆಯ ಮೂಲಕ ವಿನ್ಯಾಸಗೊಳಿಸಿರುವ ಎಂಕೆ–II ಯಂತ್ರವನ್ನು ಸಮರ ಸನ್ನದ್ಧತೆಯನ್ನು ಬಲಗೊಳಿಸುವ ಭಾಗವಾಗಿ ಸೇರಿಸಿಕೊಳ್ಳಲಾಗಿದೆ. ಈ ಸಲಕರಣೆಯನ್ನು ಬಿಇಎಂಎಲ್ ತಯಾರಿಸಿದೆ. ಆತ್ಮನಿರ್ಭರ ಭಾರತದ ಸ್ಫೂರ್ತಿ ಮತ್ತು ಎಂಜಿನಿಯರ್‌ಗಳ ತಾಂತ್ರಿಕ ಸಾಮರ್ಥ್ಯದ ಗಮನಾರ್ಹ ಸಾಧನೆ ಇದು’ ಎಂದು ಸೇನೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.