ಜೈಪುರ: ಜೈಸಲ್ಮೇರ್‌ನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಅತಿಥಿ ಗೃಹದ ವ್ಯವಸ್ಥಾಪಕನನ್ನು ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸುತ್ತಿದ್ದ ಆರೋಪದಡಿ ಬಂಧಿಸಲಾಗಿದೆ.
ಉತ್ತರಾಖಂಡದ ಅಲ್ಮೋರಾ ನಿವಾಸಿ ಮಹೇಂದ್ರ ಪ್ರಸಾದ್ ಅವರನ್ನು ಗುಪ್ತಚರ ಮಾಹಿತಿಯ ಆಧಾರದಲ್ಲಿ ರಾಜಸ್ಥಾನದ ಪೊಲೀಸರು ಆಗಸ್ಟ್ 4ರಂದು ವಶಕ್ಕೆ ಪಡೆದಿದ್ದರು.
ಮಹೇಂದ್ರ ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾದ ಕಾರಣ ಮಂಗಳವಾರ ರಾತ್ರಿ ಅವರನ್ನು ಬಂಧಿಸಿ, ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
‘ಕ್ಷಿಪಣಿ ಪರೀಕ್ಷೆ ಮತ್ತು ವಿಜ್ಞಾನಿಗಳ ಚಲನವಲನಗಳ ಕುರಿತ ಮಾಹಿತಿಯನ್ನು ಆರೋಪಿಯು ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನದ ಗೂಢಚಾರರಿಗೆ ನೀಡುತ್ತಿದ್ದರು’ ಎಂದು ತನಿಖಾಧಿಕಾರಿ ವಿನೋದ್ ಮೀನಾ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.