ADVERTISEMENT

ಮುಂಬೈ: ₹55 ಕೋಟಿ ಮೌಲ್ಯದ ಡ್ರಗ್‌ ವಶಕ್ಕೆ

ಪಿಟಿಐ
Published 26 ಜನವರಿ 2026, 15:54 IST
Last Updated 26 ಜನವರಿ 2026, 15:54 IST
<div class="paragraphs"><p>ಮುಂಬೈ: ₹55 ಕೋಟಿ ಮೌಲ್ಯದ ಡ್ರಗ್‌ ವಶಕ್ಕೆ,</p></div>

ಮುಂಬೈ: ₹55 ಕೋಟಿ ಮೌಲ್ಯದ ಡ್ರಗ್‌ ವಶಕ್ಕೆ,

   

ಮುಂಬೈ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮೊಬೈಲ್‌ ಮೆಫೆಡ್ರೋನ್‌ ಉತ್ಪಾದನಾ ಘಟಕವನ್ನು ಪತ್ತೆ ಮಾಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ಐವರನ್ನು ಬಂಧಿಸಿ,  ₹55 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದೆ.

ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ಶುಕ್ರವಾರ ‘ಆಪರೇಷನ್‌ ಸಹ್ಯಾದ್ರಿ ಚಕ್‌ಮೇಟ್‌’ ಕಾರ್ಯಾಚರಣೆಯನ್ನು ಕೈಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

₹11.848 ಕೆ.ಜಿ ದ್ರವರೂಪದ ಡ್ರಗ್‌ ಮತ್ತು 9.326 ಕೆ.ಜಿ ಅರೆ ದ್ರವ ರೂಪದ ಡ್ರಗ್‌ ಮತ್ತು 738 ಗ್ರಾಂ ಘನ ರೂಪದ ಮಾದಕ ವಸ್ತುವನ್ನು ಮತ್ತು 71.5 ಕೆ.ಜಿ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.