ಮುಂಬೈ: ಅಂಚೆ ಇಲಾಖೆಯು ಪ್ರಾಯೋಗಿಕ ಡ್ರೋನ್ ಡೆಲಿವರಿ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಮಹಾರಾಷ್ಟ್ರದ ಕರ್ಜತ್‌ನಿಂದ ಮಾಥೇರಾನ್‌ಗೆ ಪೈಲಟ್ ಡ್ರೋನ್ ಡೆಲಿವರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅಂಚೆ ಇಲಾಖೆ ವಿಡಿಯೊ ಸಮೇತ ಎಕ್ಸ್ ಪೋಸ್ಟ್ ಹಂಚಿಕೊಂಡಿದೆ.
9.8 ಕೆಜಿ ತೂಕದ ಪಾರ್ಸೆಲ್ ಮತ್ತು ಅಂಚೆ ವಸ್ತುಗಳನ್ನು ಒಳಗೊಂಡ ಡ್ರೋನ್ 1.5 ಗಂಟೆಯ ಪ್ರಯಾಣದ ಸಮಯ ಬೇಕಾಗುವ ದೂರವನ್ನು ಕೇವಲ 15 ನಿಮಿಷದಲ್ಲಿ ಕ್ರಮಿಸುವ ಮೂಲಕ ಆಶಾಭಾವನೆ ಮೂಡಿಸಿದೆ.
ಇದು ಇಂಡಿಯಾ ಪೋಸ್ಟ್‌ನ(ಅಂಚೆ ಇಲಾಖೆ) ತೀಕ್ಷ್ಣ, ವೇಗದ ಮತ್ತು ಕೊನೆಯ ಮೈಲಿವರೆಗೆ ಅಂಚೆಯನ್ನು ತಲುಪಿಸುವ ಇಲಾಖೆಯ ಆಶಯಕ್ಕೆ ಮಹತ್ವದ ಹೆಜ್ಜೆಯಾಗಿದೆ. ಅತ್ಯಂತ ಸವಾಲಿನ ಮಾರ್ಗಗಳಲ್ಲಿಯೂ ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.