ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿ ಭಾರಿ ಮಳೆ ಸುರಿಯುತ್ತಿದೆ. ನದಿ ತೀರದಲ್ಲಿ ವಾಸವಿರುವ ಜನರಿಗೆ ವಿಪತ್ತು ಸಂದರ್ಭದಲ್ಲಿ ಮುನ್ಸೂಚನೆ ನೀಡಲು ಪೊಲೀಸರು ಡ್ರೋನ್ ಮೊರೆಹೋಗಲು ಮುಂದಾಗಿದ್ದಾರೆ.
ವಿಪತ್ತಿನ ವೇಳೆ, ಅಧಿಕಾರಿಗಳು ನದಿಪಾತ್ರದ ಹಳ್ಳಿಗಳಿಗೆ ತೆರಳಿ ಜನರಿಗೆ ಮುನ್ಸೂಚನೆ ನೀಡುವುದು ಕಷ್ಟಕರವಾಗಿರುತ್ತದೆ. ಅಲ್ಲದೆ, ಹೆಚ್ಚಿನ ಸಮಯವನ್ನೂ ತೆಗೆದುಕೊಳ್ಳುತ್ತದೆ. ಹೀಗಾಗಿ, ತಮಟೆ ಬಡಿಯುವ ಮೂಲಕ ಸಾರುವ ಸಾಂಪ್ರದಾಯಿಕ ಪದ್ಧತಿಯನ್ನು ಕೈಬಿಟ್ಟು ಡ್ರೋನ್‌ಗಳ ನೆರವು ಪಡೆಯಲು ಮುಂದಾಗಿದ್ದೇವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮರಾಠವಾಡ ಪ್ರಾಂತ್ಯದಲ್ಲಿ ಗೋದಾವರಿ, ಪೂರ್ಣ ಹಾಗೂ ಮಂಜೀರಾ ನದಿಗಳು ಹರಿಯುತ್ತವೆ. ಮಳೆಗಾಲದಲ್ಲಿ ಪ್ರವಾಹಗಳು ಸರ್ವೇಸಾಮಾನ್ಯವಾಗಿ ಸಂಭವಿಸುತ್ತಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.