ADVERTISEMENT

ಡ್ರಗ್ಸ್‌ ಮಾಫಿಯಾ: ಶಾಸಕ ರವಿನಾಯಕ್‌ ದೋಷಮುಕ್ತ

ಪಿಟಿಐ
Published 24 ಅಕ್ಟೋಬರ್ 2018, 16:15 IST
Last Updated 24 ಅಕ್ಟೋಬರ್ 2018, 16:15 IST

ಪಣಜಿ: ಮಾದಕ ವಸ್ತುಗಳ ಮಾರಾಟ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಶಾಸಕ ರವಿ ನಾಯಕ್‌ ಮತ್ತು ಅವರ ಪುತ್ರನನ್ನು ವಿಶೇಷ ತನಿಖಾ ತಂಡ ದೋಷಮುಕ್ತಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆಹದಿನೈದು ಮಂದಿಯ ವಿಚಾರಣೆ ನಡೆಸಲಾಯಿತು. ಆದರೆ, ಯಾವುದೇ ಸಾಕ್ಷ್ಯಗಳು ದೊರಕಲಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆ ಕುರಿತಂತೆ 50 ಪುಟಗಳ ವರದಿ ಸಿದ್ಧಪಡಿಸಿದ್ದು, ಈ ವಾರ ಸರ್ಕಾರಕ್ಕೆ ಸಲ್ಲಿಸುವುದಾಗಿ ಅವರು ಹೇಳಿದರು.

ADVERTISEMENT

ನಾಯಕ್, ಅವರ ಪುತ್ರ ಮತ್ತು ಕೆಲವು ಪೊಲೀಸರು ಮಾದಕ ವಸ್ತುಗಳ ಮಾರಾಟ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು2013ರಲ್ಲಿ ಗೋವಾ ಸದನ ಸಮಿತಿ ವರದಿ ನೀಡಿತ್ತು. ಈ ವರದಿಯ ತನಿಖೆಗೆ ಎಂಟು ಮಂದಿ ಸದಸ್ಯರನ್ನೊಳಗೊಂಡವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ದಿಗಂಬರ ಕಾಮತ್‌ ನೇತೃತ್ವದ ಸರ್ಕಾರದಲ್ಲಿ ರವಿ ನಾಯಕ್‌ ಗೃಹಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.