ADVERTISEMENT

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಆಲಿ ಬಿಎಸ್‌ಪಿಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 8:35 IST
Last Updated 16 ಮಾರ್ಚ್ 2019, 8:35 IST
   

ನವದೆಹಲಿ: ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಆಲಿ ಶನಿವಾರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ಕ್ಕೆ ಸೇರ್ಪಡೆಯಾದರು.

ಕರ್ನಾಟಕದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವಿನ ಸೀಟು ಹಂಚಿಕೆಯಲ್ಲಿ ಡ್ಯಾನಿಶ್‌ ಆಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್‌ 20 ಹಾಗೂ ಜೆಡಿಎಸ್‌ 8 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಹಾಪುರ್‌ ಕ್ಷೇತ್ರದಿಂದ ಡ್ಯಾನಿಶ್ ಅಲಿಸ್ಪರ್ಧಿಸುವಸಾಧ್ಯತೆಯಿದೆ.ಜೆಡಿಎಸ್‌ನಿಂದಲೇ ಸ್ವರ್ಧಿಸಲು ಮನಸ್ಸು ಮಾಡಿದ್ದರೂ ಮೈತ್ರಿಅವಕಾಶ ಸಿಗದ ಕಾರಣ ಪಕ್ಷ ತ್ಯಜಿಸಲಾಗಿದೆ ಎಂದುಅಲಿ ತಿಳಿಸಿದರು.

ADVERTISEMENT

ನಾನು ದೇವೇಗೌಡರ ಬಳಿ ಏನನ್ನು ಕೇಳುತ್ತಿರಲಿಲ್ಲ, ಅವರು ಹೇಳಿದ ಕೆಲಸವನ್ನು ಮಾತ್ರ ಮಾಡುತ್ತಿದೆ. ನಾನು ಬಿಎಸ್‌ಪಿ ಸೇರುವುದಾಗಿ ದೇವೇಗೌಡರ ಬಳಿ ಹೇಳಿ ಅವರಿಂದ ಆರ್ಶೀವಾದಪಡೆದುಕೊಂಡು ಬಂದಿದ್ದೇನೆ ಎಂದು ಡ್ಯಾನಿಶ್ ಆಲಿ ಹೇಳಿದ್ದಾರೆ.

ಉತ್ತರಪ್ರದೇಶ ನನ್ನ ಜನ್ಮಭೂಮಿಯೂ ಹೌದು, ಕರ್ಮಭೂಮಿಯೂ ಹೌದು, ದೇಶದ ಸಂವಿಧಾನಕ್ಕೆ ಅಪಾಯ ಎದುರಾಗಿರುವ ಈ ಸಂದರ್ಭದಲ್ಲಿ ನಮ್ಮ ಅಮೂಲ್ಯವಾದ ಶಕ್ತಿಯನ್ನು ಬಲಿಷ್ಠ ನಾಯಕತ್ವಕ್ಕೆ ಧಾರೆ ಎರೆಯ ಬೇಕಿದೆಎಂದು ಡ್ಯಾನಿಶ್‌ ಆಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.