ADVERTISEMENT

ಹಗಲು ಇ-ರಿಕ್ಷಾ ಚಾಲಕ, ರಾತ್ರಿ ಕಳ್ಳ! ಬಂಧಿಸಿ ಜೈಲಿಗಟ್ಟಿದ ಪೊಲೀಸರು

ಪಿಟಿಐ
Published 10 ಜುಲೈ 2025, 15:31 IST
Last Updated 10 ಜುಲೈ 2025, 15:31 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ನವದೆಹಲಿ: ಬೆಳಿಗ್ಗೆ ಇ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೊಬ್ಬ ರಾತ್ರಿ ಕಳ್ಳತನಗಳನ್ನು ಮಾಡುತ್ತಿದ್ದದ್ದನ್ನು ಪತ್ತೆ ಮಾಡಿರುವ ಪೊಲೀಸರು, ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ADVERTISEMENT

ದೆಹಲಿಯ ವಸತಿ ಪ್ರದೇಶಗಳಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಆರೋಪಿ ಅನುಮಾನ ಬರದಂತೆ ಗುರುತು ಮರೆಮಾಚಿಕೊಂಡು ಕಳ್ಳತನ ನಡೆಸಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಗಳ ವಿಶ್ಲೇಷಣೆ, ಡಿಜಿಟಲ್ ಕಣ್ಗಾವಲು ಮತ್ತು ಸ್ಥಳೀಯರ ಮಾಹಿತಿಗಳನ್ನು ಆಧರಿಸಿ ಪರಿಶೀಲಿಸಿದ ನಂತರ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಜಾಫ್‌ಗಢ ನಿವಾಸಿ ರಾಹುಲ್ (34) ಬಂಧಿತ ಆರೋಪಿ. ಜುಲೈ 2ರಂದು ದ್ವಾರಕಾದಲ್ಲಿ ಆತನನ್ನು ಬಂಧಿಸಲಾಗಿದೆ. ಆತನ ಇರುವಿಕೆಯ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.

ಆತನಿಂದ ಮೂರು ಕದ್ದ ಮೊಬೈಲ್ ಫೋನ್‌ಗಳು ಮತ್ತು ಅಪರಾಧಗಳ ಸಮಯದಲ್ಲಿ ಅವನು ಬಳಸಿದ ಇ-ರಿಕ್ಷಾವನ್ನು ತಂಡ ವಶಪಡಿಸಿಕೊಂಡಿದೆ. ತಡರಾತ್ರಿ ಮನೆಗಳಿಗೆ ಕನ್ನ ಹಾಕುತ್ತಿದ್ದ ರಾಹುಲ್, ಕೆಲವೇ ಗಂಟೆಗಳಲ್ಲಿ ಕೆಲಸ ಮುಗಿಸಿ ಇ ರಿಕ್ಷಾ ಮೂಲಕ ತೆರಳುತ್ತಿದ್ದ. ಆರ್ಥಿಕ ಸಂಕಷ್ಟದಿಂದ ಇಂತಹ ಕೃತ್ಯಕ್ಕೆ ಕೈ ಹಾಕಿದ್ದಗಿ ಒಪ್ಪಿಕೊಂಡಿದ್ದಾನೆ. ತನ್ನ ಕೃತ್ಯದಲ್ಲಿ ಮತ್ತೊಬ್ಬನ ಪಾತ್ರದ ಬಗ್ಗೆಯೂ ವಿವರಿಸಿದ್ದಾನೆ.

ಈತನ ಬಂಧನದೊಂದಿಗೆ ಚಾವ್ಲಾ, ಬಿಂದಾಪುರ ಮತ್ತು ರಣಹೋಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಐದು ಮನೆ ಕಳ್ಳತನ ಪ್ರಕರಣಗಳು ಬಗೆಹರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.