ADVERTISEMENT

ಸಿಕ್ಕಿಂ ಸಹಿತ ಹಲವೆಡೆ ಭೂಕಂಪ: ಪ್ರಧಾನಿ ಮೋದಿ ಪರಿಸ್ಥಿತಿ ಅವಲೋಕನ

ಪಿಟಿಐ
Published 5 ಏಪ್ರಿಲ್ 2021, 20:52 IST
Last Updated 5 ಏಪ್ರಿಲ್ 2021, 20:52 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಗ್ಯಾಂಗ್ಟಕ್‌/ಕೋಲ್ಕತ್ತ/ಪಟ್ನಾ: ಸಿಕ್ಕಿಂನಲ್ಲಿ ಸೋಮವಾರ ರಾತ್ರಿ ರಿಕ್ಟರ್‌ ಮಾಪಕದಲ್ಲಿ 5.4ರಷ್ಟಿದ್ದ ಭೂಕಂಪ ಸಂಭವಿಸಿದೆ. ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಗಳಲ್ಲೂ ಕಂಪನದ ಅನುಭವವಾಗಿದೆ.

ರಾತ್ರಿ 8.49ಕ್ಕೆ ಸಂಭವಿಸಿದ ಈ ಕಂಪನದ ಕೇಂದ್ರಬಿಂದು ಭಾರತ–ಭೂತಾನ್‌ ಗಡಿ ಭಾಗದಲ್ಲಿ 10 ಕಿ.ಮೀ.ಆಳದಲ್ಲಿತ್ತು. ಜನ ಗಾಬರಿಗೊಂಡರು. ಆದರೆ ಯಾವುದೇ ಸಾವು, ನೋವಿನ ವರದಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯ ಅವಲೋಕನ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT