ADVERTISEMENT

ಮೂರು ದಿನದಲ್ಲಿ ಮೂರನೇ ಬಾರಿ ಜಮ್ಮು–ಕಾಶ್ಮೀರದಲ್ಲಿ ಕಂಪಿಸಿದ ಭೂಮಿ

ಪಿಟಿಐ
Published 16 ಜೂನ್ 2020, 7:35 IST
Last Updated 16 ಜೂನ್ 2020, 7:35 IST

ಜಮ್ಮು: ಕೇಂದ್ರಾಡಳಿತ ಪ್ರದೇಶ ಜಮ್ಮು–ಕಾಶ್ಮೀರದಲ್ಲಿ ಮಂಗಳವಾರ ಬೆಳಿಗ್ಗೆ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ.

ಮೂರು ದಿನಗಳಲ್ಲಿ ಇಲ್ಲಿ ಮೂರನೇ ಬಾರಿಗೆ ಭೂಕಂಪದ ಅನುಭವವಾಗಿದ್ದು, ಯಾವುದೇ ಹಾನಿಯಾದ ಬಗ್ಗೆ ವರದಿಗಳು ಇಲ್ಲ.

‘ಬೆಳಿಗ್ಗೆ 7ರ ಸುಮಾರಿಗೆ ಭೂಮಿ ಕಂಪಿಸಿದ್ದು, ಕಂಪನ ಕೇಂದ್ರ ತಜಕಿಸ್ತಾನದಲ್ಲಿರುವುದು ದಾಖಲಾಗಿದೆ. ಕಾಶ್ಮೀರ ಕಣಿವೆ, ಶ್ರೀನಗರ, ಕಿಶ್ತವಾರ ಮತ್ತು ದೋಡಾ ಜಿಲ್ಲೆಗಳಲ್ಲಿ ಕಂಪನದ ತೀವ್ರತೆ ಹೆಚ್ಚು ಇತ್ತು’ ಎಂದುಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.