ADVERTISEMENT

ಯೋಗ ದಿನಾಚರಣೆ- ಭಾರತೀಯ ನೌಕಾಪಡೆ ಹಡಗುಗಳಲ್ಲಿ ಯೋಗ ಪ್ರದರ್ಶನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 1:38 IST
Last Updated 20 ಜೂನ್ 2019, 1:38 IST
   

ವಿಶಾಖಪಟ್ಟಣ: ಜೂನ್ 21ರಂದು ಅಂತರರಾಷ್ಟ್ರೀಯ ಯೋಗದಿನದ ಅಂಗವಾಗಿ ನೌಕಾಪಡೆಯ ಸಿಬ್ಬಂದಿ ಹಾಗೂ ನಿವಾಸಿಗಳು ಯೋಗಾಭ್ಯಾಸದಲ್ಲಿ ತೊಡಗಿದ್ದರು.

ಯೋಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಭಾರತೀಯ ವಾಯುಸೇನೆ, ನೌಕಾಪಡೆ, ಭೂಸೇನೆಯ ಸಿಬ್ಬಂದಿಯೂ ಪಾಲ್ಗೊಳ್ಳಲಿದ್ದಾರೆ. ಈಗಾಗಲೆ ಸೇನಾತುಕಡಿಗಳು ಅವರವರ ಸೇನಾ ನೆಲೆಗಳಲ್ಲಿಯೇ ಯೋಗಾಭ್ಯಾಸ ಮಾಡುತ್ತಿದ್ದಾರೆ.

ಭಾರತೀಯ ನೌಕಾಪಡೆ ಸಿಬ್ಬಂದಿಯೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯೋಗಾಭ್ಯಾಸದಿಂದ ಮಾನಸಿಕ ಒತ್ತಡಗಳಿಂದ ದೂರವಾಗಿ ರೋಗ ಮುಕ್ತರಾಗಲು ಯೋಗ ಉತ್ತಮ ಮಾರ್ಗ ಎಂದು ತಿಳಿಸಿರುವ ಭಾರತ ಯೋಗವನ್ನು ವಿಶ್ವಕ್ಕೆಪರಿಚಯಿಸಿದೆ. ಇದರ ಅಂಗವಾಗಿ ಜೂನ್ 21ರಂದುವಿಶ್ವಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ADVERTISEMENT

ಭಾರತದಲ್ಲಿಯೂ ಪ್ರತಿವರ್ಷದಂತೆ ಈ ವರ್ಷವೂ ಆಚರಿಸಲಾಗುತ್ತಿದ್ದು,ಸಿನಿಮಾ ನಟರು, ಉದ್ಯಮಿಗಳು, ರಾಜಕಾರಣಿಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ರಾಷ್ಟ್ರದ ಹಲವೆಡೆ ಯೋಗಾಭ್ಯಾಸಗಳಲ್ಲಿ ತೊಡಗಿರುವ ಜನರು ಜೂನ್ 21ರಂದು ಸಾಮೂಹಿಕವಾಗಿ ಯೋಗ ಪ್ರದರ್ಶಿಸಲಿದ್ದಾರೆ. ಇದರ ಅಂಗವಾಗಿ ವಿಶಾಖಪಟ್ಟಣದಲ್ಲಿರುವ ನೌಕಾಪಡೆಯ ಸಿಬ್ಬಂದಿ ಹಾಗೂ ನಿವಾಸಿಗಳು ಕಳೆದ ಒಂದು ವಾರದಿಂದ ಯೋಗಾಭ್ಯಾಸದಲ್ಲಿ ತೊಡಗಿದ್ದು, ಶುಕ್ರವಾರ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ, ಹಡಗುಗಳಲ್ಲಿಯೇ ಯೋಗಾಭ್ಯಾಸದಲ್ಲಿ ತೊಡಗಿರುವ ಸಿಬ್ಬಂದಿ ಯೋಗದಿನಾಚರಣೆಯ ದಿನವೂ ಇದೇ ರೀತಿ ಪ್ರದರ್ಶನ ನೀಡಲಿದ್ದಾರೆ. ಸಿಬ್ಬಂದಿಯ ಕುಟುಂಬದವರೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.