ನವದೆಹಲಿ: ವಂಚನೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ, ಹರಿಯಾಣದ ಕಾಂಗ್ರೆಸ್ ಮಾಜಿ ಶಾಸಕ ಧರ್ಮಸಿಂಗ್ ಛೋಕರ್ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಭಾನುವಾರ ಬಂಧಿಸಿದೆ.
ಛೋಕರ್ ಅವರನ್ನು ದೆಹಲಿಯ ಹೋಟೆಲ್‌ವೊಂದರಲ್ಲಿ ಬಂಧಿಸಿದ್ದು, ಗುರುಗ್ರಾಮದ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ.
ಮನೆ ಖರೀದಿದಾರರಿಂದ ₹500 ಕೋಟಿ ಪಡೆದು ವಂಚಿಸಿದ ಆರೋಪ ಸಂಬಂಧ, ಧರ್ಮಸಿಂಗ್ ಅವರ ಇಬ್ಬರು ಮಕ್ಕಳಾದ ವಿಕಾಸ್ ಛೋಕರ್ ಹಾಗೂ ಸಿಕಂದರ್ ಛೋಕರ್ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು. ಸಿಕಂದರ್ ಅವರನ್ನು ಇ.ಡಿ ಕಳೆದ ವರ್ಷ ಬಂಧಿಸಿತ್ತು. ಆ ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ವಿಕಾಸ್ ತಲೆಮರೆಸಿಕೊಂಡಿದ್ದಾರೆ.
ಪಾಣೀಪತ್ ಜಿಲ್ಲೆಯ ಸಮಾಲಖ ಕ್ಷೇತ್ರದ ಮಾಜಿ ಶಾಸಕರಾಗಿರುವ ಧರ್ಮಸಿಂಗ್ ಅವರು, ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.