ADVERTISEMENT

ಅಕ್ರಮವಾಗಿ ಹಣ ವರ್ಗಾವಣೆ: ಐಎಎಸ್‌ ಅಧಿಕಾರಿ ಪೂಜಾ ಸಿಂಘಾಲ್ ಬಂಧನ

2000ನೇ ಬ್ಯಾಚಿನ ಐಎಎಸ್‌ ಅಧಿಕಾರಿ ಪೂಜಾ ಸಿಂಘಾಲ್ ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಪಿಟಿಐ
Published 11 ಮೇ 2022, 14:15 IST
Last Updated 11 ಮೇ 2022, 14:15 IST
ಮೇ 6ರಂದು ಪೂಜಾ ಸಿಂಘಾಲ್ ಅವರಿಗೆ ಸಂಬಂಧಿಸಿದ ಹಲವು ಕಡೆಗಳಲ್ಲಿ ಇ.ಡಿ ದಾಳಿ ನಡೆಸಿದ ವೇಳೆ ಸಿಕ್ಕ ನಗದು –ಪಿಟಿಐ
ಮೇ 6ರಂದು ಪೂಜಾ ಸಿಂಘಾಲ್ ಅವರಿಗೆ ಸಂಬಂಧಿಸಿದ ಹಲವು ಕಡೆಗಳಲ್ಲಿ ಇ.ಡಿ ದಾಳಿ ನಡೆಸಿದ ವೇಳೆ ಸಿಕ್ಕ ನಗದು –ಪಿಟಿಐ   

ರಾಂಚಿ: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣ ಸಂಬಂಧ ಜಾರ್ಖಂಡ್‌ನ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಬಂಧಿಸಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಅನುದಾನ ದುರುಪಯೋಗ ಮತ್ತಿತರ ಪ್ರಕರಣ ಸಂಬಂಧ ಸತತ ಎರಡು ದಿನ ವಿಚಾರಣೆ ನಡೆಸಿದ ಬಳಿಕ ಅವರನ್ನು ಬಂಧಿಸಲಾಗಿದೆ.

2000ನೇ ಬ್ಯಾಚಿನ ಐಎಎಸ್‌ ಅಧಿಕಾರಿಯಾಗಿರುವ ಸಿಂಘಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಸಿಂಘಾಲ್ ಹಾರಿಕೆಯ ಉತ್ತರ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯ ಮೇ 6ರಂದು ಸಿಂಘಾಲ್‌ ಮತ್ತು ಉದ್ಯಮಿಯಾಗಿರುವ ಅವರ ಪತಿ ಅಭಿಷೇಕ್‌ ಝಾ ಮತ್ತಿತರರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.