ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ ₹197 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಪಿಟಿಐ
Published 3 ಏಪ್ರಿಲ್ 2021, 12:30 IST
Last Updated 3 ಏಪ್ರಿಲ್ 2021, 12:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಿಯಲ್‌ ಎಸ್ಟೇಟ್‌ ಸಂಸ್ಥೆ ಯುನಿಟೆಕ್‌ ಗ್ರೂಪ್‌ ವಿರುದ್ಧ ದಾಖಲಾಗಿದ್ದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ₹ 197 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಹೇಳಿಕೆಯಲ್ಲಿ ತಿಳಿಸಿದೆ.

ಸಿಕ್ಕಿಂನ ಗ್ಯಾಂಗ್ಟಕ್, ಕೇರಳದ ಅಲಪ್ಪುಳಾದಲ್ಲಿ ಇದ್ದ ರೆಸಾರ್ಟ್‌ ಸೇರಿದಂತೆ 10 ಆಸ್ತಿಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅನ್ವಯ ಜಪ್ತಿ ಮಾಡಲಾಗಿದೆ. ಕಾರ್ನೌಸೈಟ್‌ ಗ್ರೂಪ್‌ನ ವಿವಿಧ ಅಂಗ ಸಂಸ್ಥೆಗಳ ಮಾಲೀಕತ್ವವಿದ್ದ ಇವುಗಳ ಮೌಲ್ಯ ₹ 197.34 ಕೋಟಿ ಎಂದು ತಿಳಿಸಿದೆ.

ಯುನಿಟೆಕ್‌ ಸಮೂಹವು ಸುಮಾರು ₹ 325 ಕೋಟಿಯನ್ನು ಅಕ್ರಮವಾಗಿ ಕಾರ್ನೌಸೈಟ್‌ ಗ್ರೂಪ್‌ಗೆ ವರ್ಗಾಹಿಸಿತ್ತು. ಇದನ್ನು ಬಳಸಿ ಈಗ ಜಪ್ತಿ ಮಾಡಲಾಗಿರುವ ಆಸ್ತಿಯನ್ನು ಖರೀದಿಸಲಾಗಿತ್ತು ಎಂದು ಜಾರಿ ನಿರ್ದೇಶನಾಲಯದ ಹೇಳಿಕೆ ತಿಳಿಸಿದೆ.

ADVERTISEMENT

ಯುನಿಟೆಕ್‌ ಗ್ರೂಪ್‌ ಮತ್ತು ಇವುಗಳ ಪ್ರವರ್ತಕರಾದ ಜಯ್‌ ಚಂದ್ರ ಮತ್ತು ಅಜಯ್ ಚಂದ್ರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಸೈಪ್ರಸ್‌ ಮತು ಕೇಮನ್‌ ಐಲ್ಯಾಂಡ್‌ ಕಂಪನಿಗಳಿಗೆ ₹ 2000 ಕೋಟಿ ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪ ಇವರ ಮೇಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.