ADVERTISEMENT

ಉಗ್ರರಿಗೆ ಆರ್ಥಿಕ ನೆರವು: ₹ 6 ಲಕ್ಷದ ಆಸ್ತಿ ಜಪ್ತಿ

ಪಿಟಿಐ
Published 6 ಸೆಪ್ಟೆಂಬರ್ 2025, 13:44 IST
Last Updated 6 ಸೆಪ್ಟೆಂಬರ್ 2025, 13:44 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ನವದೆಹಲಿ: ಭಯೋತ್ಪಾದಕ ಸಂಘಟನೆಗಳಾದ ಸಿಮಿ ಮತ್ತು ಇಂಡಿಯನ್‌ ಮುಜಾಹಿದ್ದೀನ್‌ (ಐಎಂ) ವಿರುದ್ಧದ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ₹ 6.34 ಲಕ್ಷ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಜಪ್ತಿ ಮಾಡಲಾದ ಸ್ಥಿರ ಆಸ್ತಿಯು ಆರೋಪಿ ರಾಜು ಖಾನ್‌ಗೆ ಸೇರಿದ್ದು ಎಂದು ತನಿಖಾ ಸಂಸ್ಥೆಯು ಶನಿವಾರ ಹೇಳಿದೆ.

ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ನಿಬಂಧನೆಗಳಡಿ ಧೀರಜ್‌ ಸಾವೊ ಮತ್ತು ಇತರರ ವಿರುದ್ಧ ಛತ್ತೀಸಘಡ ಪೊಲೀಸರು ರಾಯಪುರದಲ್ಲಿ ದಾಖಲಿಸಿರುವ ಎಫ್‌ಐಆರ್‌ನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

‘ಪಾಕಿಸ್ತಾನದ ಖಾಲಿದ್‌’ ಎಂಬ ಸಂಸ್ಥೆಯ ಸೂಚನೆ ಮೇರೆಗೆ ಭಾರತದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಹಣವನ್ನು ಸ್ವೀಕರಿಸಲು ಕೆಲವು ಬ್ಯಾಂಕ್‌ ಖಾತೆಗಳನ್ನು ಬಳಸಲಾಗಿದೆ. ಸ್ವೀಕರಿಸಿದ ಮೊತ್ತವನ್ನು ಜುಬೈರ್‌ ಹುಸೇನ್‌, ಆಯಿಶಾ ಬಾನು ಮತ್ತು ರಾಜು ಖಾನ್‌ಗೆ ವರ್ಗಾಯಿಸಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.

ರಾಜು ಖಾನ್‌ ಈ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಖಾಲಿದ್‌ ಹಾಗೂ ಸಾವೊ ಸೂಚನೆ ಮೇರೆಗೆ ₹ 48 ಲಕ್ಷಕ್ಕೂ ಹೆಚ್ಚು ಮೊತ್ತದ ಹಣಕಾಸು ವಹಿವಾಟು ನಡೆಸಿದ್ದಾನೆ ಎಂದು ಇ.ಡಿ ತಿಳಿಸಿದೆ.

ಈ ಹಿಂದೆಯೂ ₹ 3 ಲಕ್ಷ ಮೌಲ್ಯದ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.