ADVERTISEMENT

ಪಿಎಫ್‌ಐ ವಿರುದ್ಧ ಇ.ಡಿಯಿಂದ ಮೊದಲ ಚಾರ್ಜ್‌ಶೀಟ್‌

ಪಿಟಿಐ
Published 11 ಫೆಬ್ರುವರಿ 2021, 18:31 IST
Last Updated 11 ಫೆಬ್ರುವರಿ 2021, 18:31 IST
ಇ.ಡಿ
ಇ.ಡಿ   

ನವದೆಹಲಿ: ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದ ಆರೋಪ ಎದುರಿಸುತ್ತಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಅದರ ವಿದ್ಯಾರ್ಥಿ ಘಟಕದ (ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ)ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಮೊದಲ ಚಾರ್ಜ್‌ಶೀಟ್‌ಅನ್ನು ಸಲ್ಲಿಸಿದೆ.

ಲಖನೌದಲ್ಲಿರುವ, ಅಕ್ರಮ ಹಣ ವರ್ಗಾವಣೆ ಕಾಯ್ದೆಗೆ (ಪಿಎಂಎಲ್‌ಎ) ಸಂಬಂಧಿಸಿದ ವಿಶೇಷ ನ್ಯಾಯಾಲಯದಲ್ಲಿ ಈ ಚಾರ್ಜ್‌ಶೀಟ್‌ಅನ್ನು ಸಲ್ಲಿಸಲಾಗಿದೆ.

‘ಹಾಥರಸ್‌ನಲ್ಲಿ ಕಳೆದ ವರ್ಷ ನಡೆದಿದ್ದ ಸಾಮೂಹಿಕ ಅತ್ಯಾಚಾರ ಘಟನೆ ಹಿನ್ನೆಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಹಾಗೂ ಭಯೋತ್ಪಾದನಾ ಕೃತ್ಯಗಳಿಗೆ ಪ್ರಚೋದನೆ ನೀಡಲು ಈ ಸಂಘಟನೆಗಳು ಯತ್ನಿಸುತ್ತಿದ್ದವು’ ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.

ADVERTISEMENT

ಪಿಎಫ್‌ಐ ಸದಸ್ಯ ಹಾಗೂ ಸಂಘಟನೆಯ ವಿದ್ಯಾರ್ಥಿ ಘಟಕ ಸಿಎಫ್‌ಐದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎ.ರೌಫ್‌ ಶೆರಿಫ್‌, ರಾಷ್ಟ್ರೀಯ ಖಜಾಂಚಿ ಅತಿಕ್‌–ಉರ್‌ ರೆಹಮಾನ್‌, ದೆಹಲಿ ಘಟಕದ ಪ್ರಧಾನ ಕಾರ್ಯದರ್ಶಿ ಮಸೂದ್‌ ಅಹ್ಮದ್‌, ಪಿಎಫ್‌ಐ ಜೊತೆ ನಂಟು ಹೊಂದಿದ್ದಾರೆ ಎನ್ನಲಾದ ಪತ್ರಕರ್ತ ಸಿದ್ದಿಕ್‌ ಕಪ್ಪಾನ್ ಹಾಗೂ ಮೊಹಮ್ಮದ್‌ ಆಲಂ ಎಂಬುವವರ ಹೆಸರುಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.