ADVERTISEMENT

ಮಾಜಿ ಸಿಎಂ ಸಿಂಗ್‌ ವಿರುದ್ಧ ಇ.ಡಿ ಮಧ್ಯಂತರ ಚಾರ್ಜ್‌ಶೀಟ್‌ ಸಲ್ಲಿಕೆ

ED files supplementary charge sheet against ex-HP CM Virbhadra Singh in DA case

ಪಿಟಿಐ
Published 22 ಫೆಬ್ರುವರಿ 2019, 16:02 IST
Last Updated 22 ಫೆಬ್ರುವರಿ 2019, 16:02 IST

ನವದೆಹಲಿ: ಹಿಮಾಚಲಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರಸಿಂಗ್‌ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ (ಜಾರಿ ನಿರ್ದೇಶನಾಲಯ) ಮಧ್ಯಂತರ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ.

ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳಾದ ನಿತೇಶ್‌ ರಾಣಾ ಮತ್ತು ಎನ್‌.ಕೆ.ಮಟ್ಟ ಅವರ ಮೂಲಕ ಇ.ಡಿ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 18ರಂದು ನಡೆಸುವುದಾಗಿ ವಿಶೇಷ ನ್ಯಾಯಾಧೀಶ ಅರುಣ್‌ ಭಾರದ್ವಾಜ್‌ ಹೇಳಿದ್ದಾರೆ.

ADVERTISEMENT

ಸಿಂಗ್‌ ಮತ್ತು ಅವರ ಪತ್ನಿ ಹಾಗೂ ಇತರರ ವಿರುದ್ಧ ಸಿಬಿಐ ಕೂಡ ಪ್ರತ್ಯೇಕ ಪ್ರಕರಣ ದಾಖಲಿಸಿದೆ. ಸಿಂಗ್‌ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದಾಗ ಸುಮಾರು ₹10 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವುದಾಗಿ ಸಿಬಿಐ ಆಪಾದಿಸಿದೆ. ಸಿಬಿಐ ದಾಖಲಿಸಿದ ದೂರು ಆಧರಿಸಿ ಇ.ಡಿ ಕೂಡ ಪ್ರಕರಣ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.