
ಪಣಜಿ/ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಗೋವಾದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡ ಸಂಬಂಧ ಕ್ಲಬ್ ಮಾಲೀಕರ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ (ಇ.ಡಿ), ಗೋವಾ, ನವದೆಹಲಿ ಮತ್ತು ಹರಿಯಾಣದಲ್ಲಿ ಶುಕ್ರವಾರ ದಾಳಿ ನಡೆಸಿದೆ.
ದೆಹಲಿಯ ಹಡ್ಸನ್ ಲೇನ್‌ನಲ್ಲಿ ವಾಸವಿರುವ, ನೈಟ್‌ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಅವರ ನಿವಾಸ ಹಾಗೂ ಕಚೇರಿಗಳು, ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿರುವ ಸಹ ಮಾಲೀಕ ಅಜಯ್ ಗುಪ್ತಾ ಅವರ ಕಚೇರಿ ಮತ್ತು ನಿವಾಸ, ಗುರುಗ್ರಾಮದಲ್ಲಿರುವ ತತ್ವಂ ವಿಲ್ಲಾಗಳು, ಅರ್ಪೋರಾ–ನಗೋವಾದ ಮಾಜಿ ಸರಪಂಚ್ ರೋಷನ್ ರೆಡ್ಕರ್, ಗೋವಾದ ಪಂಚಾಯತ್ ಕಾರ್ಯದರ್ಶಿ ರಘುವೀರ್ ಬಾಗ್ಕರ್ ಅವರ ಕಚೇರಿಗಳು ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕೆಲ ಸ್ಥಳಗಳಿಂದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇ.ಡಿ ಅಧಿಕಾರಿಗಳ ಪ್ರಕಾರ, ಕ್ಲಬ್‌ಗೆ ರೆಡ್ಕರ್ ಮತ್ತು ಬಾಗ್ಕರ್ ಅಕ್ರಮವಾಗಿ ವ್ಯಾಪಾರ ಪರವಾನಗಿ ಮತ್ತು ನಿರಾಕ್ಷೇಪಣಾ ಪತ್ರಗಳನ್ನು ಒದಗಿಸಿದ್ದಾರೆ.
ಉಪ್ಪು ತಯಾರಿಕೆಯ ಪರಿಧಿಯಲ್ಲಿದ್ದ ಜಮೀನಿನ ಒಂದು ಭಾಗವನ್ನು ವಸತಿ ವಲಯಕ್ಕೆ ಅಕ್ರಮವಾಗಿ ಭೂಪರಿವರ್ತಿಸಲಾಗಿದ್ದು, ಈ ಸಂದರ್ಭದಲ್ಲಿ ನಡೆದಿರುವ ಹಣ ಅಕ್ರಮ ವರ್ಗಾವಣೆ ಕುರಿತು ಪರಿಶೀಲಿಸಲು ಬ್ರಿಟಿಷ್ ಪ್ರಜೆ ಮತ್ತು ಕ್ಲಬ್‌ನ ಮಾಲೀಕರಲ್ಲಿ ಒಬ್ಬರಾದ ಸುರಿಂದರ್ ಕುಮಾರ್ ಖೋಸ್ಲಾ ಅವರ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದರು.
ಖೋಸ್ಲಾ ವಿದೇಶಕ್ಕೆ ಪಲಾಯನ ಮಾಡಿರುವುದರಿಂದ ಗೋವಾ ಪೊಲೀಸರು ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದಾರೆ.
ಡಿ.6ರ ಮಧ್ಯರಾತ್ರಿ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 25 ಜನ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.