ADVERTISEMENT

ವಂಚನೆ: ₹175 ಕೋಟಿ ಮೊತ್ತದ ಆಸ್ತಿ ವಶಕ್ಕೆ ಪಡೆದ ಇ.ಡಿ

ಪಿಟಿಐ
Published 15 ಅಕ್ಟೋಬರ್ 2025, 14:27 IST
Last Updated 15 ಅಕ್ಟೋಬರ್ 2025, 14:27 IST
.
.   

ನವದೆಹಲಿ: ಖರೀದಿದಾರರಿಗೆ ಹಸ್ತಾಂತರ ಮಾಡದಿದ್ದ ಫ್ಲ್ಯಾಟ್‌ಗಳು, ವಾಣಿಜ್ಯ ಕಟ್ಟಡಗಳು ಸೇರಿ ಸುಮಾರು ₹175 ಕೋಟಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ವಶಕ್ಕೆ ಪಡೆದಿದೆ. 

ರಾಜಸ್ಥಾನದ ಉದಯಪುರದಲ್ಲಿ ರಾಯಲ್‌ ರಾಜ್‌ವಿಲಾಸ್‌ (ಆರ್‌ಆರ್‌ವಿ) ಎಂಬ ಏಜೆನ್ಸಿ ನಿರ್ಮಿಸಿದ್ದ 354 ಫ್ಲ್ಯಾಟ್‌ಗಳು, 17 ವಾಣಿಜ್ಯ ಕಟ್ಟಡಗಳು ಹಾಗೂ 2 ನಿವೇಶನಗಳನ್ನು ಖರೀದಿದಾರರಿಗೆ ಹಂಚಿಕೆ ಮಾಡದೆ ವಂಚಿಸಲಾಗಿತ್ತು. ಮನೆ ಖರೀದಿದಾರರು ಮುಂಗಡ ಹಣ ನೀಡಿ, 12 ವರ್ಷಗಳಿಂದ ಫ್ಲ್ಯಾಟ್‌ಗಾಗಿ ಕಾಯುತ್ತಿದ್ದರು. 

ಈ ಪ್ರಕರಣದ ಪ್ರಮುಖ ಆರೋಪಿ, ಸಿಂಡಿಕೇಟ್‌ ಬ್ಯಾಂಕ್‌ಗೆ ₹1267.79 ಕೋಟಿ ವಂಚಿಸಿದ್ದ ಭಾರತ್‌ ಬಾಂಬ್‌ ಮತ್ತಿತರರ ವಿರುದ್ಧವೂ ಇ.ಡಿ ಪ್ರಕರಣ ದಾಖಲಿಸಿದೆ.  

ADVERTISEMENT

ಉದಯಪುರದ ‘ಎಂಟರ್‌ಟೈನ್‌ಮೆಂಟ್‌ ವರ್ಲ್ಡ್‌ ಪ್ರೈವೆಟ್‌ ಲಿ. ಕಂಪನಿಗೆ ಸೇರಿದ ₹83.51 ಕೊಟಿಯ ಆಸ್ತಿಯೂ ಸೇರಿದಂತೆ 2019ರಿಂದ ಇದುವರೆಗೆ ಇ.ಡಿ ಸುಮಾರು ₹535 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.