ADVERTISEMENT

ಡಿಕೆಶಿ ತಾಯಿ, ಪತ್ನಿಗೂ ಸಮನ್ಸ್: ಜಾಮೀನು ಅರ್ಜಿ ವಿಚಾರಣೆ ಇಂದು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 19:38 IST
Last Updated 14 ಅಕ್ಟೋಬರ್ 2019, 19:38 IST
ಡಿ.ಕೆ. ಶಿವಕಮಾರ್‌
ಡಿ.ಕೆ. ಶಿವಕಮಾರ್‌   

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕಮಾರ್‌ ಅವರ ತಾಯಿ ಹಾಗೂ ಪತ್ನಿಗೂ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ಜಾರಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳುವ ನಿಟ್ಟಿನಲ್ಲಿ ಡಿಕೆಶಿ ಅವರ ತಾಯಿ ಗೌರಮ್ಮ ಅವರಿಗೆ ಮಂಗಳವಾರ (ಅ.15) ಹಾಗೂ ಪತ್ನಿ ಉಷಾ ಅವರಿಗೆ 17ರಂದು ವಿಚಾರಣೆಗಾಗಿ ಹಾಜರಾಗಲು ಸೂಚಿಸಿದೆ.

ವಿಚಾರಣೆ ವೇಳೆ ಪತ್ತೆಯಾಗಿರುವ ಶಿವಕುಮಾರ್‌ ಅವರ ₹ 800 ಕೋಟಿಗೂ ಅಧಿಕ ಆಸ್ತಿಯಲ್ಲಿ ತಾಯಿ ಮತ್ತುಪತ್ನಿ ಹೆಸರಲ್ಲೂ ಆಸ್ತಿ ಇರುವುದರಿಂದ ವಿಚಾರಣೆಗೆ ಒಳಪಡಿಸಲಾಗುತ್ತದೆ.

ADVERTISEMENT

ಜಾಮೀನು ಅರ್ಜಿ ವಿಚಾರಣೆ ಇಂದು: ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಇ.ಡಿ. ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರಕ್ಕೆ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.