ADVERTISEMENT

ಏರ್‌ಏಷ್ಯಾ ಸಿಇಒಗೆ ಇ.ಡಿ ಸಮನ್ಸ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 20:00 IST
Last Updated 16 ಜನವರಿ 2020, 20:00 IST

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆಸಂಬಂಧಿಸಿದಂತೆ ‘ಏರ್‌ಏಷ್ಯಾ’ ವಿಮಾನಯಾನ ಸಂಸ್ಥೆಯ ಸಿಇಒ ಟೋನಿ ಫರ್ನಾಂಡಿಸ್‌ ಮತ್ತು ಸಿಬ್ಬಂದಿಗೆಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ಜಾರಿಮಾಡಿದೆ.

ಸಿಬಿಐ ದಾಖಲಿಸಿಕೊಂಡಿದ್ದಎಫ್‌ಐಆರ್‌ ಅನ್ವಯಮೇ 2018ರಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಫರ್ನಾಂಡಿಸ್‌, ಸಲಹೆಗಾರ ದೀಪಕ್‌ ತಲ್ವಾರ್‌, ಏರ್‌ಏಷ್ಯಾ ನಿರ್ದೇಶಕ ಆರ್‌.ವೆಂಕಟರಾಮನ್‌ ಸೇರಿದಂತೆ ಹಲವರಿಗೆ ಸಮನ್ಸ್ ನೀಡಿದೆ.

ಜನವರಿಯಲ್ಲಿ ತನಿಖೆಗೆ ಒಳಗಾಗಬೇಕೆಂದು ಫರ್ನಾಂಡಿಸ್‌ ಅವರಿಗೆ ನೋಟಿಸ್‌ ನೀಡಿದ್ದರೆ, ಉಳಿದವರು ನಂತರದಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.

ADVERTISEMENT

ಸಿಂಗಪುರದ ಕಂಪನಿಯೊಂದಕ್ಕೆ ₹ 12.28 ಕೋಟಿಯನ್ನು ‌‌‘ಏರ್‌ಏಷ್ಯಾ’ ಅಕ್ರಮವಾಗಿ ವರ್ಗಾಯಿಸಿದೆ ಎಂಬ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.