ADVERTISEMENT

ಭೂಸ್ಥಿರ ಉಪಗ್ರಹದ ಪರಿಣಾಮಕಾರಿ ಬಳಕೆ: ಸಿಡಿಲಿನ ನಿಖರ ಮಾಹಿತಿ ಸಾಧ್ಯ ಎಂದ ISRO

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 15:52 IST
Last Updated 1 ಏಪ್ರಿಲ್ 2025, 15:52 IST
<div class="paragraphs"><p>ಸಿಡಿಲು (ಸಾಂದರ್ಭಿಕ ಚಿತ್ರ )</p></div>

ಸಿಡಿಲು (ಸಾಂದರ್ಭಿಕ ಚಿತ್ರ )

   

ಬೆಂಗಳೂರು: ‘ಭಾರತದ ಭೂಸ್ಥಿರ ಉಪಗ್ರಹಗಳಿಂದ ಲಭ್ಯವಾಗುವ ಮಾಹಿತಿಯ ಪರಿಣಾಮಕಾರಿ ಬಳಕೆಯಿಂದಾಗಿ ಹವಾಮಾನ ವರದಿಯ ಜತೆಗೆ, ಸಿಡಿಲಿನ ನಿಖರ ಮಾಹಿತಿ ನೀಡುವುದು ಈಗ ಸಾಧ್ಯವಾಗಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಂಗಳವಾರ ಹೇಳಿದೆ.

‘ಇಸ್ರೊದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (NRSC) ಈ ಮಹತ್ವದ ಸಾಧನೆ ಮಾಡಿದ್ದು, ಹವಾಮಾನ ಮುನ್ಸೂಚನೆಯಲ್ಲಿ ಇದೊಂದು ಮೈಲಿಗಲ್ಲಾಗಿದೆ’ ಎಂದು ಹೇಳಿದೆ.

ADVERTISEMENT

ಭೂಮಿಯ ಮೇಲ್ಮೈನ ಟ್ರೊಪೋಸ್ಟಿಯರ್‌ನಲ್ಲಿ ಗಾಳಿ, ತಾಪಮಾನ, ವಿಕರಣಗಳಿಂದಾಗಿ ಉಂಟಾಗುವ ಘರ್ಷಣೆಯಿಂದ ಮಿಂಚು, ಗುಡುಗು, ಸಿಡಿಲು ಉಂಟಾಗುತ್ತದೆ. ಇನ್‌ಸ್ಯಾಟ್‌–3ಡಿ ಉಪಗ್ರಹದ ಮೂಲಕ ಹೊರ ಹೋಗುವ ಲಾಂಗ್‌ವೇವ್‌ ರೇಡಿಯೇಷನ್‌ನ (OLR) ಮಾಹಿತಿಯಲ್ಲಿ ಮಿಂಚಿನ ಲಕ್ಷಣಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ ಎಂದು ಇಸ್ರೊ ತನ್ನ ಪ್ರಕಟಣೆಯಲ್ಲಿ ಹೇಳಿದೆ. 

‘ಒಎಲ್‌ಆರ್‌ ಸಾಮರ್ಥ್ಯ ಕ್ಷೀಣಿಸಿದಷ್ಟೂ ಮಿಂಚು, ಸಿಡಲು ಹಾಗೂ ಗುಡುಗು ಸಾಧ್ಯತೆ ಹೆಚ್ಚು ಎಂದರ್ಥ. ಇದನ್ನು ಇನ್‌ಸ್ಯಾಟ್‌ ಸರಣಿಯ ಉಪಗ್ರಹಗಳು ಪತ್ತೆ ಮಾಡುತ್ತವೆ’ ಎಂದು ವಿವರಿಸಲಾಗಿದೆ. 

‘ಭೂಮಿ ಮೇಲಿನ ಅಧ್ಯಯನ ಕೇಂದ್ರದಲ್ಲಿ ಉಪಗ್ರಹ ಕಳುಹಿಸುವ ಮಾಹಿತಿ ಆಧರಿಸಿ ಮಿಂಚು, ಗುಡುಗು ಹಾಗೂ ಸಿಡಿಲಿನ ಮಾಹಿತಿ ಕಲೆಹಾಕಲಾಗುತ್ತದೆ. ಯಾವ ಸಮಯದಲ್ಲಿ ಇದರ ಪ್ರಮಾಣ ಹೆಚ್ಚು ಹಾಗೂ ಕಡಿಮೆ ಎಂಬುದನ್ನು ಹೇಳಲು ಸಾಧ್ಯವಾಗಿದೆ. ಹೀಗಾಗಿ 2.5 ಗಂಟೆಗೂ ಮೊದಲೇ ಮುನ್ಸೂಚನೆ ನೀಡುವಷ್ಟು ಸಾಮರ್ಥ್ಯ ಹೊಂದಿದೆ’ ಎಂದು ಇಸ್ರೊ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.