ADVERTISEMENT

ಸೌಹಾರ್ದ ಸಂದೇಶ ಸಾರಿದ ‘ಏಕತಾ ಚಪ್ಪಲ್ ಘರ್‌’

ಅಹಮದಾಬಾದ್‌ನಲ್ಲಿ ಕೋಮು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 18:43 IST
Last Updated 6 ಸೆಪ್ಟೆಂಬರ್ 2019, 18:43 IST
ಅಂಗಡಿ ಮುಂದೆ ಅಶೋಕ್‌ ಪರ್ಮಾರ್‌ ಮತ್ತು ಕುತುಬುದ್ದೀನ್‌ ಅನ್ಸಾರಿ
ಅಂಗಡಿ ಮುಂದೆ ಅಶೋಕ್‌ ಪರ್ಮಾರ್‌ ಮತ್ತು ಕುತುಬುದ್ದೀನ್‌ ಅನ್ಸಾರಿ   

ಅಹಮದಾಬಾದ್‌ (ಪಿಟಿಐ): 2002ರಲ್ಲಿ ನಡೆದ ಗೋಧ್ರಾ ಹಿಂಸಾಚಾರದ ಸಂದರ್ಭದಲ್ಲಿ ಗಮನಸೆಳೆದಿದ್ದ ಇಬ್ಬರು ವ್ಯಕ್ತಿಗಳು ಈಗ ಏಕತೆಯ ಸಂದೇಶ ಸಾರುತ್ತಿದ್ದಾರೆ.

ಕೈಮುಗಿದು ಕಣ್ಣೀರಿಡುತ್ತಾ ದಯನೀಯವಾಗಿ ಪ್ರಾರ್ಥಿಸುತ್ತಿದ್ದ ಕುತುಬುದ್ದೀನ್‌ ಅನ್ಸಾರಿ ಅವರ ಚಿತ್ರವು ದೌರ್ಜನ್ಯದ ತೀವ್ರತೆ ಅನಾವರಣ
ಗೊಳಿಸಿತ್ತು. ಕಪ್ಪು ಗಡ್ಡ ಮತ್ತು ಹಣೆಗೆ ಕೇಸರಿ ಪಟ್ಟಿ ಧರಿಸಿ ಕೈಯಲ್ಲಿ ಖಡ್ಗ ಹಿಡಿದಿದ್ದ ಅಶೋಕ್‌ ‍‍ಪರ್ಮಾರ್‌ ಅಲಿಯಾಸ್‌ ಮೋಚಿ ಎನ್ನುವ ವ್ಯಕ್ತಿಯ ಚಿತ್ರ ದಾಳಿಯ ಭೀಕರ ಚಿತ್ರಣ ಬಿಂಬಿಸಿತ್ತು.

ಈಗ ಅಶೋಕ್‌ ಪರ್ಮಾರ್‌ ಅವರ ಚಪ್ಪಲಿ ಅಂಗಡಿಯನ್ನು ಕುತುಬುದ್ದೀನ್‌ ಅನ್ಸಾರಿ ಉದ್ಘಾಟಿಸುವ ಮೂಲಕ ಕೋಮು ಸೌರ್ಹಾದಕ್ಕೆ ಸಾಕ್ಷಿಯಾಗಿದ್ದಾರೆ. ಮೋಚಿ ಅವರ ಚಪ್ಪಲಿ ಅಂಗಡಿಗೆ ‘ಏಕತಾ ಚಪ್ಪಲ್‌ ಘರ್‌’ ಎಂದು ಹೆಸರಿಡಲಾಗಿದೆ.

ADVERTISEMENT

‘ಅಂಗಡಿ ಸ್ಥಾಪಿಸಲು ಮೋಚಿ ಅವರಿಗೆ ಕೇರಳದ ಸಿಪಿಐ(ಎಂ) ಪಕ್ಷ ನೆರವು ನೀಡಿದೆ. ಪಾದಚಾರಿ ಮಾರ್ಗದಲ್ಲೇ ಮೋಚಿ ಶೂ ಮಾರಾಟ ಮಾಡುತ್ತಿದ್ದ’ ಎಂದು ಅಹಮದಾಬಾದ್‌ನ ಕಾರ್ಯಕರ್ತ ಕಲೀಂ ಸಿದ್ದಿಕಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.