ADVERTISEMENT

ಮಹಾರಾಷ್ಟ್ರ | ನೂತನ ಸರ್ಕಾರದಲ್ಲಿ ಭಾಗಿಯಾಗಲು ಶಿಂದೆ ಬಯಸಿರಲಿಲ್ಲ: ಉದಯ್‌ ಸಾಮಂತ್

ಪಿಟಿಐ
Published 7 ಡಿಸೆಂಬರ್ 2024, 4:34 IST
Last Updated 7 ಡಿಸೆಂಬರ್ 2024, 4:34 IST
<div class="paragraphs"><p>&nbsp;ಏಕನಾಥ ಶಿಂದೆ</p></div>

 ಏಕನಾಥ ಶಿಂದೆ

   

ಮುಂಬೈ: ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮಹಾರಾಷ್ಟ್ರದ ಹೊಸ ಸರ್ಕಾರವನ್ನು ಸೇರಲು ಬಯಸಿರಲಿಲ್ಲ. ಬದಲಾಗಿ ತಮ್ಮ ಪಕ್ಷವನ್ನು ಕಟ್ಟುವತ್ತ ಗಮನ ಹರಿಸಲು ಬಯಸಿದ್ದರು ಎಂದು ಶಿವಸೇನಾ ನಾಯಕ ಉದಯ್‌ ಸಾಮಂತ್‌ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾಯುತಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಶಿವಸೇನಾ ಮುಖ್ಯಸ್ಥ ಏಕನಾಥ ಶಿಂದೆ ಅವರು ಉಪಮುಖ್ಯಮಂತ್ರಿಯಾಗಲು ಆಸಕ್ತಿ ಹೊಂದಿರಲಿಲ್ಲ. ಆದರೆ, ಪಕ್ಷದ ನಾಯಕರ ಒತ್ತಾಯಕ್ಕೆ ಮಣಿದಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ಗುರುವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಶಿಂದೆ ಅವರು ಪಕ್ಷದ ಕಚೇರಿಯಲ್ಲಿ ಶಿವಸೇನಾ ಮುಖಂಡರೊಂದಿಗೆ ಮಾತನಾಡಿದರು ಎಂದು ಅವರು ಹೇಳಿದ್ದಾರೆ.

‘ಶಿಂದೆ ಅವರು ತಮ್ಮ ಪಕ್ಷ ಕಟ್ಟುವತ್ತ ಗಮನ ಹರಿಸಲು ಬಯಸಿದ್ದರು. ಆದರೆ, ಮಹಾರಾಷ್ಟ್ರದ ಹೊಸ ಸರ್ಕಾರದ ಭಾಗವಾಗಬೇಕೆಂದು ಪಕ್ಷದ ಶಾಸಕರು ಮತ್ತು ನಾಯಕರು ಒತ್ತಾಯಿಸಿದ್ದರು. ನಮ್ಮ ಮನವಿಯನ್ನು ಅವರು ಗೌರವಿಸಿದ್ದಾರೆ’ ಎಂದು ಸಾಮಂತ್‌ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟವು ಜಯಗಳಿಸಿದ ಎರಡು ವಾರಗಳ ನಂತರ ಗುರುವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ನಾಯಕರಾದ ಏಕನಾಥ ಶಿಂದೆ ಮತ್ತು ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.