ADVERTISEMENT

ವಿದ್ಯುತ್ ಚಾಲಿತ ವಾಹನಗಳಿಗೆ ನೋಂದಣಿ ಶುಲ್ಕ ವಿನಾಯಿತಿ- ಕೇಂದ್ರ ಸರ್ಕಾರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 15:56 IST
Last Updated 19 ಜೂನ್ 2019, 15:56 IST
   

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳಿಗೆ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲು ಕೇಂದ್ರಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರ ಈ ಸಂಬಂಧ ಕರಡು ಸಿದ್ಧಪಡಿಸಿದ್ದು, ವಿದ್ಯುತ್ ಚಾಲಿತ ವಾಹನಗಳ ಉಪಯೋಗ ಹೆಚ್ಚಳಕ್ಕಾಗಿ ಈ ನಿಯಮ ಜಾರಿಗೊಳಿಸಲಿದೆ.ಇದರಿಂದಾಗಿ ಹೆಚ್ಚುತ್ತಿರುವವಾಯುಮಾಲಿನ್ಯ ಕಡಿಮೆಯಾಗುವುದಲ್ಲದೆ, ಇಂಧನಕ್ಕಾಗಿ ಭಾರತ ಇತರೆ ದೇಶಗಳ ಮೇಲೆ ಅವಲಂಬಿತವಾಗುವುದು ಕ್ರಮೇಣ ಕಡಿಮೆಯಾಗುವುದು ಎಂದು ತಿಳಿಸಿದೆ. ಅಲ್ಲದೆ,2015ರಲ್ಲಿ ನಡೆದ ಪ್ಯಾರಿಸ್ ಒಪ್ಪಂದವನ್ನು ಭಾರತ ಪಾಲಿಸಿದಂತಾಗುತ್ತದೆ. ಈ ಒಪ್ಪಂದದಂತೆ ವಾಯುಮಾಲಿನ್ಯ ಕಡಿಮೆಗೊಳಿಸುವ ಸಂಬಂಧ ಉತ್ತೇಜನಕಾರಿ ನಿಯಮಗಳನ್ನು ಜಾರಿಗೆ ತರುವುದಾಗಿ ಭಾರತ ಸಹಿ ಮಾಡಿತ್ತು.

ಉದ್ದೇಶಿತ ಶುಲ್ಕ ವಿನಾಯಿತಿ ನಿಯಮ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಾಹನಗಳಿಗೂ ಅನ್ವಯಿಸಲಿದೆ. ಎಲೆಕ್ಟ್ರಾನಿಕ್ ಹಾಗೂ ಎಲೆಕ್ಟ್ರಿಕಲ್ ಸ್ಕೂಟರ್, ಮೋಟಾರ್ ಬೈಕ್, ರಿಕ್ಷಾ, ಕಾರುಗಳಿಗೆ ಇನ್ನು ಮುಂದೆ ನೋಂದಣಿ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ. ಈ ಕರಡು ಸಿದ್ಧಗೊಂಡಿದ್ದು ಮುಂದಿನ ಹಂತದಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾದನಂತರ ನಿಯಮ ಜಾರಿಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.