ADVERTISEMENT

ಒಸಾಮಾ ಬಿನ್‌ ಲಾಡೆನ್‌ ಸಾವು!

ಪಿಟಿಐ
Published 17 ನವೆಂಬರ್ 2019, 19:10 IST
Last Updated 17 ನವೆಂಬರ್ 2019, 19:10 IST
ಅಸ್ಸಾಂನಲ್ಲಿ ಮೃತಪಟ್ಟ ಒಸಾಮಾ ಬಿಲ್ ಲಾಡೆನ್ ಆನೆ
ಅಸ್ಸಾಂನಲ್ಲಿ ಮೃತಪಟ್ಟ ಒಸಾಮಾ ಬಿಲ್ ಲಾಡೆನ್ ಆನೆ   

ಗುವಾಹಟಿ: ಒಸಾಮಾ ಬಿನ್‌ ಲಾಡೆನ್‌ ಎಂದಾಕ್ಷಣ ಅಮೆರಿಕದ ವಿಶ್ವ ವ್ಯಾಪಾರ ಸಂಘಟನೆ ಕಟ್ಟಡದ ಮೇಲಿನ ದಾಳಿ ನೆನಪಿಗೆ ಬರುತ್ತದೆ. ಈತನನ್ನು ಅಮೆರಿಕವೇ ಮಟ್ಟಹಾಕಿದ್ದು ಇತಿಹಾಸ.

ಆದರೆ ಅಸ್ಸಾಂನಲ್ಲಿದ್ದ ಒಸಾಮಾ ಬಿನ್‌ ಲಾಡೆನ್‌ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. ಅಂದ ಹಾಗೆ ಈ ಲಾಡೆನ್‌ ಉಗ್ರನಲ್ಲ ಬದಲಿಗೆ ಆನೆ. ಭಾರಿ ಉಪಟಳ ಮಾಡುತ್ತಿದ್ದ ಆನೆಗೆ ಈ ಹೆಸರಿಡಲಾಗಿತ್ತು. ಇತ್ತೀಚೆಗಷ್ಟೇ ಇದನ್ನು ಸೆರೆಹಿಡಿಯಲಾಗಿತ್ತು.

ಅಸ್ಸಾಂನ ಗೋಪಾಲಪುರದಲ್ಲಿ ಅಕ್ಟೋಬರ್‌ನಲ್ಲಿ ಐವರನ್ನು ಲಾಡೆನ್‌ ಸಾಯಿಸಿದ ನಂತರ ಇದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಒರಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ ಇದನ್ನು ಇಡಲಾಗಿತ್ತು. ಭಾನುವಾರ ಬೆಳಿಗ್ಗೆ ಲಾಡೆನ್‌ ಕೊನೆಯಿಸಿರೆಳೆದಿದೆ. ಮೃತಪಡಲು ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.