ADVERTISEMENT

ಉತ್ತರಾಖಂಡ: ಕಣಿವೆ ಪಿಕಪ್‌ ವಾಹನ ಬಿದ್ದು 14 ಸಾವು

ಪಿಟಿಐ
Published 22 ಫೆಬ್ರುವರಿ 2022, 10:59 IST
Last Updated 22 ಫೆಬ್ರುವರಿ 2022, 10:59 IST
ಉತ್ತರಾಖಂಡದ ಚಂಪಾವತ್‌ ಜಿಲ್ಲೆಯಲ್ಲಿ ಸಂಭವಿಸಿದ ಆಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ವೈದ್ಯಕೀಯ ತಂಡದಿಂದ ರಕ್ಷಣಾ ಕಾರ್ಯ ನಡೆಯಿತು.
ಉತ್ತರಾಖಂಡದ ಚಂಪಾವತ್‌ ಜಿಲ್ಲೆಯಲ್ಲಿ ಸಂಭವಿಸಿದ ಆಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ವೈದ್ಯಕೀಯ ತಂಡದಿಂದ ರಕ್ಷಣಾ ಕಾರ್ಯ ನಡೆಯಿತು.   

ಡೆಹ್ರಾಡೂನ್‌: ಉತ್ತಾರಖಂಡದ ಚಂಪಾವತ್‌ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಮದುವೆಮುಗಿಸಿಕೊಂಡು ವಾಪಸ್ ತೆರಳುತ್ತಿದ್ದಾಗ ಪಿಕಪ್‌ ವಾಹನ ಆಳದ ಕಣಿವೆಗೆ ಬಿದ್ದು ಇಬ್ಬರು ಮಕ್ಕಳು, ಐವರು ಮಹಿಳೆಯರು ಸೇರಿ 14 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಸುಖಿಧಾಂಗ್‌– ದಂಡಮಿನಾರ್‌ ರಸ್ತೆಯ ನಡುವೆ ರಾತ್ರಿ 10 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಬಗ್ಗೆ ಮಂಗಳವಾರ ನಸುಕಿನ 3 ಗಂಟೆ ಸುಮಾರಿಗಷ್ಟೇ ಸ್ಥಳೀಯ ಆಡಳಿತಗಳಿಗೆ ತಲುಪಿತು. ಬಳಿಕ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಮೊದಲಿಗೆ 12 ಮೃತದೇಹಗಳನ್ನು ಹೊರೆ ತೆಗೆದವು ಎಂದು ಚಂಪಾವತ್‌ ಎಸ್ಪಿ ದೇವೇಂದ್ರ ಪಿಂಚಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಸಂಬಂಧಿಕರಿಗೆ ತಲಾ ₹ 2 ಲಕ್ಷ, ಗಾಯಾಳುಗಳಿಗೆ ತಲಾ ₹ 50,000 ಘೋಷಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.