ADVERTISEMENT

ಎಲ್ವಿರಾ ಬ್ರಿಟ್ಟೊ ನಿಧನ: ಸಹೋದರಿಯರ ಆಟವನ್ನು ನೆನೆದು ಭಾವುಕರಾದ ಜೈರಾಮ್‌ ರಮೇಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2022, 5:58 IST
Last Updated 27 ಏಪ್ರಿಲ್ 2022, 5:58 IST
ಎಲ್ವಿರಾ ಬ್ರಿಟ್ಟೊ
ಎಲ್ವಿರಾ ಬ್ರಿಟ್ಟೊ   

ಬೆಂಗಳೂರು: ಅರವತ್ತರ ದಶಕದ ಮಹಿಳಾ ಹಾಕಿಯ ಚಾಂಪಿಯನ್‌ ಆಟಗಾರ್ತಿ ಮತ್ತು ಆಡಳಿತಗಾರ್ತಿ ಎಲ್ವಿರಾ ಬ್ರಿಟ್ಟೊ (81) ಅವರು ಮಂಗಳವಾರ ನಿಧನರಾದ ಕುರಿತು ಕಂಬನಿ ಮಿಡಿದ ರಾಜ್ಯಸಭೆ ಸದಸ್ಯ ಜೈರಾಮ್‌ ರಮೇಶ್‌, ಮೈಸೂರು ರಾಜ್ಯ, ಮಹಿಳಾ ಹಾಕಿ ತಂಡ ಹಾಗೂ ಬ್ರಿಟ್ಟೊ ಸಹೋದರಿಯರ ನೆನಪುಗಳ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

'1960ರಲ್ಲಿ, ಆಗಿನ ಮೈಸೂರು ರಾಜ್ಯವು, ಎಲ್ಲರ ಮನೆಮಾತಾಗಿದ್ದ ಶ್ರೇಷ್ಠ ಕ್ರಿಕೆಟ್‌ ಆಟಗಾರರನ್ನಷ್ಟೇ ಅಲ್ಲ, ಅತ್ಯುತ್ತಮ ಮಹಿಳಾ ಹಾಕಿ ತಂಡವನ್ನೂ ಹೊಂದಿತ್ತು. ಅದರಲ್ಲಿ 'ಬ್ರಿಟ್ಟೊ ಸಹೋದರಿಯರು' ಎಂಬ ಅದ್ಭುತ ಆಟಗಾರ್ತಿಯರು- ಎಲ್ವಿರಾ, ರೀಟಾ ಮತ್ತು ಮೇ ಇದ್ದರು. ಅವರು ಭಾರತದ ಪರವಾಗಿಯೂ ಆಡಿದ್ದಾರೆ. ಎಲ್ವಿರಾ ನಿಧನದಿಂದ ತುಂಬಾ ಹಚ್ಚಿಕೊಂಡಿದ್ದ ಹಿಂದಿನ ಹಲವಾರು ನೆನಪುಗಳು ಮರುಕಳಿಸಿದವು' ಎಂದು ಜೈರಾಮ್‌ ರಮೇಶ್‌ ಭಾವುಕರಾಗಿ ಟ್ವೀಟ್‌ ಮಾಡಿದ್ದಾರೆ.

1960ರಲ್ಲಿ, ಎಲ್ವಿರಾ ಬ್ರಿಟ್ಟೊ ಅವರು ಜಪಾನ್‌, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಲ್ಲಿ ಆಡಿದ್ದ ಭಾರತ ಮಹಿಳಾ ಹಾಕಿ ತಂಡದ ನಾಯಕಿಯಾಗಿದ್ದರು. ಅವರಿಗೆ ಇಬ್ಬರು ಸಹೋದರಿಯರಾದ ರೀಟಾ ಮತ್ತು ಮೇ ಇದ್ದಾರೆ. ಇವರಿಬ್ಬರೂ ಆಟಗಾರ್ತಿಯರಾಗಿದ್ದು, 'ಬ್ರಿಟ್ಟೊ ಸಹೋದರಿಯರು' ಎಂದೇ ಮೂವರೂ ಹಾಕಿ ಲೋಕದಲ್ಲಿ ಚಿರಪರಿಚಿತರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.