ADVERTISEMENT

ಜೈಪುರ: ತುಂಡಾದ ಭ್ರೂಣ

ಪಿಟಿಐ
Published 11 ಜನವರಿ 2019, 19:34 IST
Last Updated 11 ಜನವರಿ 2019, 19:34 IST

ಜೈಪುರ: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪುರುಷ ನರ್ಸ್‌ಗಳಿಬ್ಬರು ಮಹಿಳೆಯೊಬ್ಬರ ಹೆರಿಗೆ ಮಾಡಿಸುವ ಸಂದರ್ಭದಲ್ಲಿ, ಭ್ರೂಣವನ್ನು ಜೋರಾಗಿ ಎಳೆದು ಎರಡು ಭಾಗ ಮಾಡಿದ್ದಾರೆ.

ಇಬ್ಬರನ್ನೂ ಸರ್ಕಾರ ಅಮಾನತುಗೊಳಿಸಿದೆ. ಇದೇ 6ರಂದು ನರ್ಸ್‌ಗಳು ಬಲವಂತವಾಗಿ ಭ್ರೂಣವನ್ನು ಎಳೆದಾಗ ಅದರ ತಲೆ ಗರ್ಭದಲ್ಲೇ ಉಳಿಯಿತು. ಹೊರಗೆ ಬಂದ ದೇಹದ ಭಾಗವನ್ನು ನರ್ಸ್‌ಗಳು ಶವಾಗಾರದಲ್ಲಿ ಇಟ್ಟಿದ್ದರು. ಕುಟುಂಬದವರು ಈ ಸಂಬಂಧ ‍ಪೊಲೀಸರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT