ADVERTISEMENT

ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಎನ್‌ಕೌಂಟರ್‌

ಪಿಟಿಐ
Published 11 ಮೇ 2021, 5:23 IST
Last Updated 11 ಮೇ 2021, 5:23 IST
ಎನ್‌ಕೌಂಟರ್–ಪ್ರಾತಿನಿಧಿಕ ಚಿತ್ರ
ಎನ್‌ಕೌಂಟರ್–ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಕೊಮೆರ್‌ನಾಗ್‌ ಪ್ರದೇಶ ವೈಲೂ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್ ನಡೆದಿದೆ.

ಉಗ್ರರು ಈ ಪ್ರದೇಶದಲ್ಲಿರುವ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಮಂಗಳವಾರ ಬೆಳಿಗ್ಗೆ ಶೋಧ ಕಾರ್ಯ ಆರಂಭಿಸಿದ್ದವು. ಆಗ ಭದ್ರತಾ ಪಡೆಗಳತ್ತ ಉಗ್ರರು ಗುಂಡು ಹಾರಾಟ ನಡೆಸಿದರು. ಪ್ರತಿಯಾಗಿ ಭದ್ರತಾ ಪಡೆಗಳೂ ಗುಂಡು ಹಾರಿಸಿವೆ.

ಕಾರ್ಯಾಚರಣೆಯಲ್ಲಿ ಗುಂಡಿಗೆ ಒಬ್ಬ ಉಗ್ರ ಬಲಿಯಾಗಿದ್ದಾನೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.