ADVERTISEMENT

ತಂಬಾಕು ಉತ್ಪನ್ನ: ಹೊಸ ಎಚ್ಚರಿಕೆಯ ಸಂದೇಶ ಪ್ರಕಟಣೆಯ ಖಾತರಿಗೆ ಸೂಚನೆ

ಪಿಟಿಐ
Published 6 ಡಿಸೆಂಬರ್ 2020, 14:38 IST
Last Updated 6 ಡಿಸೆಂಬರ್ 2020, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಆಗುವ ಹಾನಿಯ ಕುರಿತು ಹೊಸದಾಗಿ ರೂಪಿಸಿರುವ ಎಚ್ಚರಿಕೆಯ ಸಂದೇಶವನ್ನು ತಂಬಾಕು ಉತ್ಪನ್ನಗಳ ಮೇಲೆ ಚಿತ್ರಸಹಿತ ಪ್ರಕಟಿಸುವುದನ್ನು ಖಾತರಿಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ಈ ಎಚ್ಚರಿಕೆ ಸಂದೇಶ ತಂಬಾಕು ಸೇವನೆಯ ಗಂಭೀರ ಮತ್ತು ವ್ಯತಿರಿಕ್ತ ಆರೋಗ್ಯದ ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಲಿದೆ. ಅದರಲ್ಲೂ ಮುಖ್ಯವಾಗಿ ಯುವಜನ, ಮಕ್ಕಳು ಮತ್ತು ಅನಕ್ಷರಸ್ಥರ ಜಾಗೃತಿಗೆ ಅಗತ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ 2008ರಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳನ್ನು ರೂಪಿಸಿದೆ. ಎಲ್ಲಾ ತಂಬಾಕು ಉತ್ಪನ್ನ ಪ್ಯಾಕ್‌ಗಳಲ್ಲಿ ನಿಗದಿತ ಆರೋಗ್ಯ ಸಂಬಂಧಿತ ಎಚ್ಚರಿಕೆಗಳನ್ನು ನೀಡುವ ನಿಯಮಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತದೆ. ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲೆ ಶೇ 85ರಷ್ಟು ನಿಗದಿತ ಆರೋಗ್ಯ ಎಚ್ಚರಿಕೆಗಳನ್ನು ನೀಡುವುದು ಕಡ್ಡಾಯವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.