ADVERTISEMENT

ಕೋವಿಡ್‌ ಲಸಿಕೆ ವ್ಯರ್ಥವಾಗದಂತೆ ಕ್ರಮ: ಕೇಂದ್ರ ಸೂಚನೆ

ಅವಧಿ ಮುಗಿಯಲಿರುವ ಲಸಿಕೆ ವಯಲ್ ಬದಲಾಯಿಸಲು ಒಪ್ಪಿಗೆ

ಪಿಟಿಐ
Published 3 ಮಾರ್ಚ್ 2022, 11:45 IST
Last Updated 3 ಮಾರ್ಚ್ 2022, 11:45 IST
ಕೋವಿಡ್‌ ಲಸಿಕೆ
ಕೋವಿಡ್‌ ಲಸಿಕೆ   

ನವದೆಹಲಿ: ಕೋವಿಡ್‌ ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಶೀಘ್ರವೇ ಅವಧಿ ಮುಗಿಯಲಿರುವ ಲಸಿಕೆಯ ವಯಲ್‌ಗಳುಖಾಸಗಿ ಆಸ್ಪತ್ರೆಗಳಲ್ಲಿ ಇದ್ದಲ್ಲಿ, ಅವುಗಳನ್ನು ಪಡೆದು, ಸರ್ಕಾರಿ ಆಸ್ಪತ್ರೆ/ಉಗ್ರಾಣಗಳಲ್ಲಿ ದಾಸ್ತಾನಿರುವ ದೀರ್ಘ ಅವಧಿಯ ವಯಲ್‌ಗಳನ್ನು ಆ ಆಸ್ಪತ್ರೆಗಳಿಗೆ ಪೂರೈಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

ಈ ಕುರಿತು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ಅವರುರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ‘ಅವಧಿ ಮುಗಿಯಲಿರುವ ಲಸಿಕಯನ್ನು ಬದಲಾಯಿಸಲು ಆರೋಗ್ಯ ಸಚಿವಾಲಯದ ಆಕ್ಷೇಪವಿಲ್ಲ. ಆದರೆ, ಇಂಥ ಕ್ರಮ ಕೈಗೊಳ್ಳುವ ಮುನ್ನ ಸೂಕ್ತ ಪರಿಶೀಲನೆ ಅಗತ್ಯ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಕಾರಣಕ್ಕೂ ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.

ADVERTISEMENT

ಕೋವಿಡ್‌ ಲಸಿಕಾ ಕೇಂದ್ರಗಳು (ಸಿವಿಸಿ) ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯತೆ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದೂ ಸಚಿವಾಲಯ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.