ADVERTISEMENT

ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ: ಪ್ರಮಾಣವಚನ ಸ್ವೀಕಾರ

ಪಿಟಿಐ
Published 25 ಮಾರ್ಚ್ 2023, 11:02 IST
Last Updated 25 ಮಾರ್ಚ್ 2023, 11:02 IST
ಎರಿಕ್ ಗಾರ್ಸೆಟ್ಟಿ
ಎರಿಕ್ ಗಾರ್ಸೆಟ್ಟಿ   

ವಾಷಿಂಗ್ಟನ್‌: ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಸಮ್ಮುಖದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗಾರ್ಸೆಟ್ಟಿ ಅವರ ಮಗಳು ಮಾಯಾ ಅವರು ಬೈಬಲ್‌ ಹಿಡಿದುಕೊಂಡಿದ್ದರು. ಸಮಾರಂಭದಲ್ಲಿ ಗಾರ್ಸೆಟ್ಟಿ ಅವರ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.

‘ಇದು ನನಗೆ ಲಭಿಸಿದ ಅದ್ಭುತ ಅವಕಾಶ’ ಎಂದು 52 ವರ್ಷದ ಗಾರ್ಸೆಟ್ಟಿ ಹೇಳಿದ್ದಾರೆ.

ADVERTISEMENT

ಲಾಸ್‌ ಏಂಜಲೀಸ್‌ನ ಮಾಜಿ ಮೇಯರ್‌ ಆಗಿರುವ ಗಾರ್ಸೆಟ್ಟಿ ಅವರನ್ನು ಅಧ್ಯಕ್ಷ ಜೋ ಬೈಡನ್‌ ಅವರು 2021ರ ಜುಲೈನಲ್ಲಿ ನಾಮನಿರ್ದೇಶನ ಮಾಡಿದ್ದರು. ಗಾರ್ಸೆಟ್ಟಿ ಅವರು ಬೈಡನ್‌ ಅವರ ಆಪ್ತರಾಗಿದ್ದಾರೆ.

ಗಾರ್ಸೆಟ್ಟಿ ಅವರ ನಾಮನಿರ್ದೇಶನಕ್ಕೆ ಅಮೆರಿಕದ ಸೆನೆಟ್‌ 52–42 ಮತಗಳಿಂದ ಅನುಮೋದನೆ ನೀಡಿತ್ತು.

ಗಾರ್ಸೆಟ್ಟಿ ಭೇಟಿಯಾದ ತರಣ್‌ಜಿತ್‌:

ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ತರಣ್‌ಜಿತ್‌ ಸಿಂಗ್ ಸಂಧು ಅವರು ಎರಿಕ್ ಗಾರ್ಸೆಟ್ಟಿ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಆದ್ಯತೆ ನೀಡುವ ವಿಚಾರವಾಗಿ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.