ADVERTISEMENT

77ನೇ ಗಣರಾಜ್ಯೋತ್ಸವಕ್ಕೆ ಐರೋಪ್ಯ ಒಕ್ಕೂಟದ ನಾಯಕರು ಭಾಗಿ: ವಿದೇಶಾಂಗ ಸಚಿವಾಲಯ

ಪಿಟಿಐ
Published 15 ಜನವರಿ 2026, 15:42 IST
Last Updated 15 ಜನವರಿ 2026, 15:42 IST
ಆಂಟೋನಿಯೊ ಲೂಯಿಸ್ (ಎಎಫ್‌ಪಿ ಚಿತ್ರ)
ಆಂಟೋನಿಯೊ ಲೂಯಿಸ್ (ಎಎಫ್‌ಪಿ ಚಿತ್ರ)   

ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಐರೋಪ್ಯ ಒಕ್ಕೂಟದ (ಇಯು) ಇಬ್ಬರು ಉನ್ನತ ನಾಯಕರು ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಪ್ರಕಟಿಸಿದೆ.

ಪ್ರಧಾನಿ ನರೇಂದ್ರ ಮೋದಿಯ ಆಹ್ವಾನದ ಮೇರೆಗೆ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಲೂಯಿ ಸ್ಯಾಂಟೋಸ್ ಡ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‌ ಲೇಯನ್ ಜನವರಿ 25ರಿಂದ 27ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಉರ್ಸುಲಾ ವಾನ್ ಡೆರ್‌  

ADVERTISEMENT

ಈ ಪ್ರವಾಸದ ಸಮಯದಲ್ಲಿ ಎರಡೂ ಕಡೆಯವರು ಬಹುನಿರೀಕ್ಷಿತ ಭಾರತ–ಐರೋಪ್ಯ ಒಕ್ಕೂಟದ ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವ ನಿರೀಕ್ಷೆಯಿದೆ. ಭಾರತ ಮತ್ತು ಐರೋಪ್ಯ ಒಕ್ಕೂಟ 2004ರಿಂದ ಕಾರ್ಯತಂತ್ರದ ಪಾಲುದಾರರಾಗಿವೆ.

ಜನವರಿ 27ರಂದು ನಡೆಯಲಿರುವ 16ನೇ ಭಾರತ–ಐರೋಪ್ಯ ಒಕ್ಕೂಟದ ಶೃಂಗಸಭೆಯ ಸಹ–ಅಧ್ಯಕ್ಷತೆಯನ್ನೂ ಅವರು ವಹಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.