ADVERTISEMENT

ಸುನಿಲ್‌ ಜಾಖಡ್‌ ಬಿಜೆಪಿ ಸೇರ್ಪಡೆ

ಪಿಟಿಐ
Published 19 ಮೇ 2022, 18:25 IST
Last Updated 19 ಮೇ 2022, 18:25 IST
ಸುನಿಲ್‌ ಜಾಖಡ್‌
ಸುನಿಲ್‌ ಜಾಖಡ್‌   

ನವದೆಹಲಿ: ಪಂಜಾಬ್‌ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಸುನಿಲ್‌ ಜಾಖಡ್‌ ಅವರು ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಪಂಜಾಬ್‌ನ ಪ್ರಮುಖ ಹಿಂದೂ ನಾಯಕರಾದ ಸುನಿಲ್‌ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪಕ್ಷಕ್ಕೆ ಬರಮಾಡಿಕೊಂಡರು.

‘ಕಾಂಗ್ರೆಸ್‌ ಪಕ್ಷವು ಪಂಜಾಬ್‌ನಲ್ಲಿ ಜಾತಿ, ಸಮುದಾಯ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸುವ ಮೂಲಕ ಸಹೋದರತ್ವಕ್ಕೆ ಅವಮಾನ ಎಸಗಿದೆ’ ಎಂದು ಸುನಿಲ್ ಆರೋಪಿಸಿದರು.

ADVERTISEMENT

ಸುನಿಲ್‌ ಅವರ ಸೇರ್ಪಡೆಯಿಂದ ಗಡಿ ರಾಜ್ಯದಲ್ಲಿ ರಾಷ್ಟ್ರೀಯವಾದಿ ಶಕ್ತಿಗಳನ್ನು ಬಲಪಡಿಸಲು ಬಿಜೆಪಿಗೆ ಸಹಕಾರಿಯಾಗಲಿದೆ ಎಂದು ನಡ್ಡಾ ಅವರು ಅಭಿಪ್ರಾಯಪಟ್ಟಿದ್ದಾರೆ. ಸುನಿಲ್‌ ಅವರು ಕಳೆದ ವಾರ ಕಾಂಗ್ರೆಸ್‌ ತೊರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.