ADVERTISEMENT

ದೆಹಲಿಯ ಪಟೇಲ್‌ ಹೌಸ್‌ ಖಾಲಿ ಮಾಡಲು ದೇವೇಗೌಡರಿಗೆ ಸೂಚನೆ

ಪಿಟಿಐ
Published 26 ಅಕ್ಟೋಬರ್ 2019, 19:30 IST
Last Updated 26 ಅಕ್ಟೋಬರ್ 2019, 19:30 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ನವದೆಹಲಿ: ದೆಹಲಿಯ ಲ್ಯುಟೆನ್ಸ್‌ ಪ್ರದೇಶದಲ್ಲಿರುವ ವಿಠ್ಠಲ್‌ ಭಾಯಿ ಪಟೇಲ್‌ ಹೌಸ್‌ ಅನ್ನು ಖಾಲಿ ಮಾಡುವಂತೆ ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರಿಗೆ ಕೇಂದ್ರ ಸರ್ಕಾರ ಶನಿವಾರ ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿಯಾಗಿರುವುದರಿಂದ ದೇವೇಗೌಡ ಅವರಿಗೆ ಅಧಿಕೃತ ನಿವಾಸವಾಗಿರುವ ಸಫ್ದರ್‌ಜಂಗ್‌ ಲೇನ್‌ ಬಂಗಲೆಯಲ್ಲಿ ವಾಸವಿರಲು ಅವಕಾಶ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

‘ಕಳೆದ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ದೇವೇಗೌಡರು, ಬಹಳ ವರ್ಷಗಳಿಂದ ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದ ಜೊತೆಗೆ ಪಟೇಲ್‌ ಹೌಸ್‌ನ್ನು ಅತಿಥಿಗೃಹವನ್ನಾಗಿ ಮಾಡಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಲೋಕಸಭೆಗೆ ಚುನಾವಣೆ ನಡೆದ ನಂತರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ತಿಂಗಳೊಳಗೆ ಮಾಜಿ ಸಂಸದರು ಅಧಿಕೃತ ನಿವಾಸಗಳನ್ನು ಖಾಲಿ ಮಾಡಬೇಕು ಎಂಬ ನಿಯಮವಿದೆ. ಇನ್ನೂ 25 ಮಂದಿ ಮಾಜಿ ಸಂಸದರು ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.