ADVERTISEMENT

ಕಾನೂನು ಆಯೋಗದ ಅಧ್ಯಕ್ಷರಾಗಿ ನ್ಯಾ. ದಿನೇಶ್‌ ಮಾಹೇಶ್ವರಿ ನೇಮಕ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 18:45 IST
Last Updated 15 ಏಪ್ರಿಲ್ 2025, 18:45 IST
ನ್ಯಾ. ದಿನೇಶ್‌ ಮಾಹೇಶ್ವರಿ
ನ್ಯಾ. ದಿನೇಶ್‌ ಮಾಹೇಶ್ವರಿ   

ನವದೆಹಲಿ (ಪಿಟಿಐ): ‌ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಅವರನ್ನು 23ನೇ ಕಾನೂನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಕಾನೂನು ಸಚಿವಾಲಯ ‘ಎಕ್ಸ್‌’ನಲ್ಲಿ ತಿಳಿಸಿದೆ.

23ನೇ ಕಾನೂನು ಆಯೋಗವನ್ನು ಕಳೆದ ವರ್ಷ ಸೆಪ್ಟೆಂಬರ್ 3ರಂದು ಮೂರು ವರ್ಷಗಳ ಅವಧಿಗೆ ರಚಿಸಲಾಗಿತ್ತು. ವಕೀಲ ಹಿತೇಶ್ ಜೈನ್ ಮತ್ತು ಪ್ರೊ.ಡಿ. ಪಿ. ವರ್ಮಾ ಅವರನ್ನು ಪೂರ್ಣಾವಧಿ ಸದಸ್ಯರನ್ನಾಗಿ ನೇಮಿಸಲಾಗಿದೆ. ವರ್ಮಾ ಅವರು ಈ ಹಿಂದಿನ ಕಾನೂನು ಆಯೋಗದ ಭಾಗವಾಗಿದ್ದರು. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಪರಿಚಯಿಸಬಹುದೇ ಎಂದು ಪರಿಶೀಲಿಸುವ ಕಾರ್ಯವನ್ನೂ ಆಯೋಗಕ್ಕೆ ವಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT