ರಾಜನಾಥ್ ಸಿಂಗ್
ಪಿಟಿಐ ಸಂಗ್ರಹ ಚಿತ್ರ
ನವದೆಹಲಿ: ಕೇಂದ್ರೀಯ ಸೈನಿಕ ಮಂಡಳಿಯ ಮೂಲಕ ಮಾಜಿ ಸೈನಿಕರ ಕಲ್ಯಾಣ ಇಲಾಖೆಯು ಜಾರಿಗೆ ತಂದಿರುವ ಯೋಜನೆಗಳ ಅಡಿಯಲ್ಲಿ ಮಾಜಿ ಸೈನಿಕರು(ಇಎಸ್‌ಎಂ) ಮತ್ತು ಅವರ ಅವಲಂಬಿತರಿಗೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಶೇ 100ರಷ್ಟು ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಅನುಮೋದನೆ ನೀಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪೆನರಿ ಅನುದಾನವನ್ನು ಪ್ರತಿ ಫಲಾನುಭವಿಗೆ ತಿಂಗಳಿಗೆ ₹4,000 ದಿಂದ ₹8,000ಕ್ಕೆ ದ್ವಿಗುಣಗೊಳಿಸಲಾಗಿದೆ. ಇದು ನಿಯಮಿತ ಆದಾಯವಿಲ್ಲದ ವೃದ್ಧರು, ಪಿಂಚಣಿ ಪಡೆಯದ ಇಎಸ್ಎಂ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವಿಧವೆಯರಿಗೆ ನಿರಂತರ ಜೀವಿತಾವಧಿಯ ಬೆಂಬಲವನ್ನು ಒದಗಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಮಾಜಿ ಸೈನಿಕರಿಗೆ ಅವಲಂಬಿತ ಇಬ್ಬರು ಮಕ್ಕಳಿಗೆ (Iನೇ ತರಗತಿಯಿಂದ ಪದವಿ) ಅಥವಾ ಎರಡು ವರ್ಷಗಳ ಸ್ನಾತಕೋತ್ತರ ಕೋರ್ಸ್‌ಗೆ ಶಿಕ್ಷಣ ಅನುದಾನವನ್ನು ₹1,000 ದಿಂದ ₹2,000ಕ್ಕೆ ಹೆಚ್ಚಿಸಲಾಗಿದೆ.
ವಿವಾಹ ಅನುದಾನವನ್ನು ಪ್ರತಿ ಫಲಾನುಭವಿಗೆ %50,000 ದಿಂದ ₹1,00,000ಕ್ಕೆ ಹೆಚ್ಚಿಸಲಾಗಿದೆ. ಈ ಆದೇಶ ಹೊರಡಿಸಿದ ನಂತರ ನಡೆಯುವ ಮಾಜಿ ಸೈನಿಕನ ಇಬ್ಬರು ಹೆಣ್ಣುಮಕ್ಕಳಿಗೆ ಮತ್ತು ವಿಧವಾ ಪುನರ್ವಿವಾಹಕ್ಕೆ ಈ ಅನುದಾನ ಅನ್ವಯಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪರಿಷ್ಕೃತ ಅನುದಾನ ನವೆಂಬರ್ 1ರಿಂದ ಸಲ್ಲಿಸಲಾಗುವ ಅರ್ಜಿಗಳಿಗೆ ಅನ್ವಯವಾಗಲಿದ್ದು,
ನವೆಂಬರ್ 1ರಿಂದ ಸಲ್ಲಿಕೆಯಾಗುವ ಅರ್ಜಿಗಳಿಗೆ ಪರಿಷ್ಕೃತ ಅನುದಾನ ಅನ್ವಯವಾಗಲಿದ್ದು, ಸಶಸ್ತ್ರ ಪಡೆಗಳ ಧ್ವಜ ದಿನದ ನಿಧಿಗೆ(ಎಎಫ್‌ಎಫ್ಡಿಎಫ್) ವಾರ್ಷಿಕ ಸುಮಾರು ₹257 ಕೋಟಿ ಆರ್ಥಿಕ ಹೊರೆಯಾಗಲಿದೆ.